ಹೂಡಿಕೆದಾರರಿಗೆ ನೀಡಬೇಕಾಗಿರುವ ರೂ.300 ಕೋಟಿ ಡಿಪಾಸಿಟ್ ನೀಡುವಲ್ಲಿ ಸಹಾರಾ ಕಂಪನಿ ವಿಫಲವಾಗಿದ್ದು, ಇದರ ಭಾಗವಾಗಿರುವ ಅಂಬೆ ವ್ಯಾಲಿಯನ್ನು ಹರಾಜು ಹಾಕಲು ಸುಪ್ರೀಂಕೋರ್ಟ್ ಆದೇಶಿಸಿದೆ.

ನವದೆಹಲಿ (ಏ.17): ಹೂಡಿಕೆದಾರರಿಗೆ ನೀಡಬೇಕಾಗಿರುವ ರೂ.300 ಕೋಟಿ ಡಿಪಾಸಿಟ್ ನೀಡುವಲ್ಲಿ ಸಹಾರಾ ಕಂಪನಿ ವಿಫಲವಾಗಿದ್ದು, ಇದರ ಭಾಗವಾಗಿರುವ ಅಂಬೆ ವ್ಯಾಲಿಯನ್ನು ಹರಾಜು ಹಾಕಲು ಸುಪ್ರೀಂಕೋರ್ಟ್ ಆದೇಶಿಸಿದೆ.

ಸುಬ್ರತಾ ರಾಯ್ ತಾಯಿ ನಿಧನರಾದಾಗ ಸಾಕಷ್ಟು ಬಾರಿ ಪೆರೋಲ್ ನೀಡಿರುವುದನ್ನು ಸುಪ್ರೀಂಕೋರ್ಟ್ ಉಲ್ಲೇಖಿಸುತ್ತಾ, ಕೋರ್ಟ್ ನೀಡಿದ ಸಡಿಲಿಕೆಯನ್ನು ಸುಬ್ರತಾ ರಾಯ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದೆ.

ಸಹಾರಾ ಕಂಪನಿ ರೂ.5000 ಕೋಟಿ ಡಿಪಾಸಿಟ್ ಮಾಡುವಲ್ಲಿ ವಿಫಲವಾದರೆ ಪುಣೆಯಲ್ಲಿರುವ ಅಂಬೆ ವ್ಯಾಲಿಯನ್ನು ಹರಾಜು ಹಾಕುವುದಾಗಿ ಸುಪ್ರೀಂಕೋರ್ಟ್ ಕಳೆದ ತಿಂಗಳು ಹೇಳಿತ್ತು. ಅದರಂತೆ ಇದುವರೆಗೂ ಕಂಪನಿ ಡಿಪಾಸಿಟ್ ಮಾಡಲು ವಿಫಲವಾಗಿದ್ದು ಇದೀಗ ಅಂಬೆ ವ್ಯಾಲಿಯನ್ನು ಹರಾಜು ಹಾಕಲು ಸುಪ್ರೀಂ ಆದೇಶಿಸಿದೆ.