ಕನ್ನಡಿಗರಿಗೆ ಪಾಠ ಕಲಿಸಬೇಕು ಎನ್ನುವ ಕಾರಣಕ್ಕಾಗಿಯೇ 50 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಅಣ್ಣಾದುರೈ ಹುಟ್ಟುಹಾಕಿದ ಪ್ರಾದೇಶಿಕ ಪಕ್ಷವನ್ನು ಅಲ್ಲಿಯ ಜನ ಬೆಳೆಸಿದ್ದಾರೆ. ಇದರಿಂದ ಕನ್ನಡಿಗರಾದ ನಾವು ಬಹಳ ಪೆಟ್ಟು ತಿಂದಿದ್ದೇವೆ. ಈಗಲಾದರೂ ಕನ್ನಡಿಗರು ಎಚ್ಚೆತ್ತು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.
ಕನ್ನಡಿಗರಿಗೆ ಪಾಠ ಕಲಿಸಬೇಕು ಎನ್ನುವ ಕಾರಣಕ್ಕಾಗಿಯೇ 50 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಅಣ್ಣಾದುರೈ ಹುಟ್ಟುಹಾಕಿದ ಪ್ರಾದೇಶಿಕ ಪಕ್ಷವನ್ನು ಅಲ್ಲಿಯ ಜನ ಬೆಳೆಸಿದ್ದಾರೆ. ಇದರಿಂದ ಕನ್ನಡಿಗರಾದ ನಾವು ಬಹಳ ಪೆಟ್ಟು ತಿಂದಿದ್ದೇವೆ. ಈಗಲಾದರೂ ಕನ್ನಡಿಗರು ಎಚ್ಚೆತ್ತು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ಶಿಕ್ಷಕರ ಪರಿಷತ್ತು ಬುಧವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ನಿವೃತ್ತ ಪ್ರಾಧ್ಯಾಪಕರ ಅಭಿ ನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿದರು.
ನಾನಿನ್ನು ನಿವೃತ್ತಿಯಾಗಿಲ್ಲ, ಮಾಡ ಬೇಕಾದ ಬಹಳಷ್ಟುಕರ್ತವ್ಯಗಳಿವೆ. ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಗಟ್ಟಿಯಾಗಿ ಉಳಿಯಬೇಕೆಂಬುದನ್ನು ಮನಗಂಡು ಕಳೆದ 50 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ವ್ಯವಸ್ಥೆ ಕುಸಿದಿದೆ: ನಮ್ಮ ರಾಜ್ಯದ ಜಲಾಶಯದಿಂದಲೇ ರಾಜಧಾನಿ ಬೆಂಗ ಳೂರಿಗೆ ಕುಡಿಯುವ ನೀರು ನೀಡಲು ಆಗುವುದಿಲ್ಲ ಎಂದು ಮೂವರು ನ್ಯಾಯಾಧೀಶರು ಆದೇಶ ಮಾಡುತ್ತಾರೆ ಎಂದರೆ ಇದು ನ್ಯಾಯಾಂಗಕ್ಕೆ ಗೌರವ ತರುವ ವಿಷಯವೇ ಎಂದು ದೇವೇ ಗೌಡರು ಪ್ರಶ್ನಿಸಿದರು.
ನ್ಯಾಯಾಧೀಶರೇ ಈ ರೀತಿ ಬರೆದರೆ ಮೆಟ್ರೋಪಾಲಿಟನ್ ನಗರದಲ್ಲಿ ವಾಸಿ ಸುತ್ತಿರುವ 1 ಕೋಟಿಗೂ ಹೆಚ್ಚು ಜನ ಎಲ್ಲಿಗೆ ಹೋಗಬೇಕು. ಇಂತಹ ನ್ಯಾ ಯಾಂಗದ ಪರಿಸ್ಥಿತಿ ಒಂದೆಡೆಯಾದರೆ ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಸ್ಥೆಯೂ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ವಿವಿಗಳು ಇಂದು ವ್ಯಾಪಾರೀಕರಣದ ದೃಷ್ಟಿಯಿಂದ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಬಡ ಮಕ್ಕಳಿಗೆ ಸರ್ಕಾರಿ ಶಾಲೆ, ಶ್ರೀಮಂತರ ಮಕ್ಕಳಿಗೆ ಖಾಸಗಿ ಶಾಲೆಗಳು ಎನ್ನುವ ಸ್ಥಿತಿ ಸ್ಥಿತಿ ದೂರವಾಗಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ಗಳ ನಿವೃತ್ತ ಪ್ರಾಧ್ಯಾಪಕರಾದ ಡಾ. ವೇಣುಗೋಪಾಲ್, ಡಾ. ಕೃಷ್ಣಸ್ವಾಮಿ, ಡಾ.ಎಂ.ವಿ. ಕೃಷ್ಣಮೂರ್ತಿ, ಪ್ರೊ. ವೇಣುಗೋಪಾಲರೆಡ್ಡಿ ಮತ್ತಿತರರನ್ನು ಸನ್ಮಾನಿಸಲಾಯಿತು. ವಿವಿಯ ಕುಲಪತಿ (ಹಂಗಾಮಿ) ಪ್ರೊ.ಎಂ. ಮುನಿರಾಜು, ಮೌಲ್ಯಮಾಪನ ಕುಲಸಚಿವ ಎಂ.ಎಸ್.ರೆಡ್ಡಿ ಇತರರು ಉಪಸ್ಥಿತರಿದ್ದರು.
