ಪ್ರಸಾದ ಖಾಲಿಯಾಗಿದೆ ಎಂದು ಹಳಸಿದ ಅನ್ನ ಸಾಂಬಾರನ್ನು ಭಕ್ತರಿಗೆ ನೀಡಲಾಗಿದೆ. ಶ್ರೀಕ್ಷೇತ್ರ ಗೋರವನಹಳ್ಳಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ತುಮಕೂರು (ನ.19): ಪ್ರಸಾದ ಖಾಲಿಯಾಗಿದೆ ಎಂದು ಹಳಸಿದ ಅನ್ನ ಸಾಂಬಾರನ್ನು ಭಕ್ತರಿಗೆ ನೀಡಲಾಗಿದೆ. ಶ್ರೀಕ್ಷೇತ್ರ ಗೋರವನಹಳ್ಳಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀಲಕ್ಷ್ಮೀ ಆಸ್ಥಾನದಲ್ಲಿ ಪ್ರಸಾದಕ್ಕೂ ಬರ ಉಂಟಾಗಿದ್ಯಾ? ಕಾರ್ತಿಕ ಮಾಸದ ದೀಪೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪ್ರಸಾದದಲ್ಲಿ ಕೆಲವರಿಗೆ ಮಾತ್ರೆ ಸಿಕ್ಕಿದೆ. ನಂತರ ಪ್ರಸಾದ ಖಾಯಿಯಾಯಿತು ಅಂತ, ಹಳಸಿದ ಅನ್ನ- ಸಾಬಾರನ್ನು ಕಲಿಸಿ ಭಕ್ತರಿಗೆ ನೀಡಿದ್ದಾರೆ. ಇದರಿಂದ ದೇವಸ್ಥಾನದ ಆಡಳಿತ ಮಂಡಳಿ ಕ್ರಮ ಖಂಡಿಸಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಕ್ಕೆ ಕೋಟಿ ಕೋಟಿ ಹಣ ಹರಿದು ಬರುತ್ತದೆ. ಆದರೂ ಕನಿಷ್ಠ ಪ್ರಸಾದ ಕೊಡಲು ಆಡಳಿತ ಮಂಡಳಿಗೆ ಸಾಧ್ಯವಾಗುವುದಿಲ್ವಾ ಅಂತ ಭಕ್ತರು ಕಿಡಿ ಕಾರಿದ್ದಾರೆ.