ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ದಡಿ ಬಡವರಿಗೆ ನೀಡಲಾಗುತ್ತಿದ್ದ 7 ಕೇಜಿ ಅಕ್ಕಿಯನ್ನು ಇದೀಗ 5 ಕೆಜಿಗೆ ಇಳಿಕೆ ಮಾಡಲಾಗಿದೆ. ಅದಕ್ಕೆ ಕಾರಣವೇನು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮರ್ಥನೆ ನೀಡಿದ್ದಾರೆ. 

ಉಡುಪಿ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ದಡಿ ಬಡವರಿಗೆ ನೀಡಲಾಗುತ್ತಿದ್ದ 7 ಕೇಜಿ ಅಕ್ಕಿಯ ಮೂಟೆ ತುಂಬಾ ಭಾರವಾಗಿತ್ತು. ಆದ್ದರಿಂದ ಇಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳು 5 ಕೇಜಿಗೆ ಇಳಿಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಈಗ ಚರ್ಚೆಗೆ ನಾಂದಿ ಹಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಕೊಡುವ ಅಕ್ಕಿ ಹೊರುವುದು ಭಾರ ಆಗುತ್ತದೆ ಎಂದು ಜನರು ದೂರುತ್ತಿದ್ದರು. ಆದ್ದರಿಂದ ಅದರ ಪ್ರಮಾಣವನ್ನು ಈ ಬಾರಿ ಬಜೆಟ್‌ನಲ್ಲಿ ಕಡಿಮೆ ಮಾಡಿದ್ದಾರೆ. ಇದೊಂದು ಪ್ರಯೋಗ ಎಂದು ಸಮಜಾಯಿಷಿ ನೀಡಿದರು.

ಕೇಂದ್ರವೇ ತೈಲ ಬೆಲೆ ಇಳಿಸಲಿ: ಇದೇ ವೇಳೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಸಮರ್ಥಿಸಿಕೊಂಡ ಮಧ್ವರಾಜ್‌, ಪೆಟ್ರೋಲ್‌ ಬೆಲೆಯನ್ನು 454 ರು.ಗೆ ಇಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದಕಾರಣ ಕೇಂದ್ರವೇ ತೈಲ ಬೆಲೆ ಇಳಿಸಲಿ ಎಂದರು.