ಮಾಜಿ ಪ್ರಧಾನಿ ಅನಿತಾ ಕುಮಾರಸ್ವಾಮಿಗೆ ಸ್ವಾಗತ : ವೈರಲ್ ಆದ ಫೋಟೊ

Anitha Kumaraswamy Flex Viral on Social Media
Highlights

  • ಫ್ಲೆಕ್ಸ್'ನಲ್ಲಿ ಮಾಜಿ ಪ್ರಧಾನಿ ಎಂದು ನಮೂದು
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೊ

ಬೆಂಗಳೂರು[ಜೂ.25]:  ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಧಾನಿ ಯಾವಾಗ ಆಗಿದ್ದರು. ಮಧುಗಿರಿ ಕ್ಷೇತ್ರದಲ್ಲಿ ಒಮ್ಮೆ  ಶಾಸಕಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಬಿಟ್ಟರೆ ದೇವೇಗೌಡರು ಮಾತ್ರ 1996ರಲ್ಲಿ ಪ್ರಧಾನಿಯಾಗಿದ್ದು ಸಾರ್ವಜನಿಕವಾಗಿ ತಿಳಿದಿರುವ ಸಂಗತಿ.

ಆದರೆ ಇಲ್ಲಿನ ಭಾವಚಿತ್ರವನ್ನು ನೋಡಿದ ಕೆಲವರಿಗಂತೂ ಸಣ್ಣ ಮಟ್ಟಿಗೆ ಅನುಮಾನ ಕಾಡದೆ ಇರದು. ಪ್ರಸಾದ್ ಎಂಬ ಜೆಡಿಎಸ್ ಕಾರ್ಯಕರ್ತನೊಬ್ಬ ಖಾಸಗಿ ಕಾರ್ಯಕ್ರಮವೊಂದಕ್ಕೆ ಅನಿತಾ ಕುಮಾರಸ್ವಾಮಿಯನ್ನು ಸ್ವಾಗತ ಬಯಸುವ ಫ್ಲೆಕ್ಸ್'ನಲ್ಲಿ ಮಾಜಿ ಶಾಸಕಿ ಎನ್ನುವ ಬದಲು ಮಾಜಿ ಪ್ರಧಾನಿ ಎಂದು ತಪ್ಪಾಗಿ ನಮೂದಿಸಿದ್ದಾನೆ.

ಸಣ್ಣ ಅಕ್ಷರದಲ್ಲಿ ಮಾಜಿ ಶಾಸಕಿ ಎಂದಿದ್ದರೆ ದಪ್ಪನಾದ ಅಕ್ಷರಗಳಲ್ಲಿ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀಮತಿ ಅನಿತಾಕುಮಾರಸ್ವಾಮಿರವರಿಗೆ ಹೃತ್ಪೂರ್ವಕ ಸ್ವಾಗತ ಎಂದು ಬರೆಸಲಾಗಿದೆ. ಈ ಫ್ಲೆಕ್ಸ್ ತಪ್ಪಾಗಿ ನಮೂದಾಗಿದ್ದೇ ಅಥವಾ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಟ್ರೋಲ್ ಮಾಡಿರುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ತಮಾಷೆಯಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಟ್ರೋಲ್ ಆಗುತ್ತಿರುವುದಂತು ಸತ್ಯ.

loader