ಕಳೆದ ಒಂದು ವಾರದಿಂದ ನಟಿ ಅನಿತಾ ಭಟ್‌ ಅವರದ್ದೇ ಸುದ್ದಿ ಮತ್ತು ವಿವಾದ. ಅದಕ್ಕೆ ಕಾರಣ ಅವರ ರಿಯಲ್‌ ಪ್ರೇಮ್‌ ಕಹಾನಿ ಕತೆಯಲ್ಲಿ ಎದುರಾದ ಏರುಪೇರುಗಳು. ತೆರೆ ಮೇಲೆ ಎಷ್ಟೋ ಪ್ರೇಮ ಕತೆಗಳು ಬಂದಿವೆ. ಜತೆಗೆ ಭಗ್ನ ಪ್ರೇಮಿಗಳು ಅನಾವರಣಗೊಂಡಿದ್ದಾರೆ. ಈ ಎಲ್ಲ ರೀತಿಯ ಕತೆಗಳಿಗೆ ಬಣ್ಣ ಹಚ್ಚಿದ ಸಿನಿಮಾದವರ ನಿಜ ಪ್ರೇಮ ಕತೆಯನ್ನೂ ಭಗ್ನತೆಯ ಗಾಳಿ ಬೀಸುತ್ತದೆ. ಅಂಥದ್ದೇ ಗಾಳಿಗೆ ಸಿಕ್ಕಿ ಒದ್ದಾಡುತ್ತಿರುವ ನಟಿ ಅನಿತಾ ಭಟ್‌. ಹಾಗೆ ನೋಡಿದರೆ ಇದು ಹದಿಹರೆಯದ ಪ್ರೇಮವಲ್ಲ. ನಡುವಯಸ್ಸಿನ ಪ್ರೇಮ! ನಾಯಕ ಸತೀಶ್‌. ಸತೀಶ್‌ ಚಿತ್ರರಂಗದಿಂದ ಆಚೆಗಿರುವ ವ್ಯಕ್ತಿ. ಇವರು ಪಿವಿಆರ್‌ನ ಪ್ರಾದೇಶಿಕ ಮ್ಯಾನೇಜರ್‌. ಹಾಗೆ ನೋಡಿದರೆ ಇವರಿಗೆ ಮದುವೆ ಆಗಿದೆ. ಅನಿತಾ ಭಟ್‌ ಅವರಿಗೂ ಮದುವೆ ಆಗಿ ಪತಿಯಿಂದ ವಿಚ್ಛೇದನ ಪಡೆದು ದೂರವಿ­ ದ್ದಾರೆ. ಅಲ್ಲದೆ ಇವರಿಗೆ ಪುತ್ರಿಯೂ ಇದ್ದಾರೆ. ಇಬ್ಬರೂ ನಡು ವಯಸ್ಸಿನವರು. ಸಿನಿಮಾ ಕಾರ್ಯಕ್ರಮ­ವೊಂದರಲ್ಲಿ ಸತೀಶ್‌ ಮತ್ತು ಅನಿತಾ ಭಟ್‌ ಪರಿಚಯವಾಗಿ ಆ ಸ್ನೇಹ ಪ್ರೀತಿಗೆ ತಿರುಗಿ ಕೊನೆಗೂ ಎರಡ್ಮೂರು ವರ್ಷ ಒಟ್ಟಿಗೆ ಒಂದೇ ಮನೆಯಲ್ಲಿ ಜೀವನ ಕೂಡ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ನಟಿ ಅನಿತಾ ಭಟ್ ಅವರದ್ದೇ ಸುದ್ದಿ ಮತ್ತು ವಿವಾದ. ಅದಕ್ಕೆ ಕಾರಣ ಅವರ ರಿಯಲ್ ಪ್ರೇಮ್ ಕಹಾನಿ ಕತೆಯಲ್ಲಿ ಎದುರಾದ ಏರುಪೇರುಗಳು. ತೆರೆ ಮೇಲೆ ಎಷ್ಟೋ ಪ್ರೇಮ ಕತೆಗಳು ಬಂದಿವೆ. ಜತೆಗೆ ಭಗ್ನ ಪ್ರೇಮಿಗಳು ಅನಾವರಣಗೊಂಡಿದ್ದಾರೆ. ಈ ಎಲ್ಲ ರೀತಿಯ ಕತೆಗಳಿಗೆ ಬಣ್ಣ ಹಚ್ಚಿದ ಸಿನಿಮಾದವರ ನಿಜ ಪ್ರೇಮ ಕತೆಯನ್ನೂ ಭಗ್ನತೆಯ ಗಾಳಿ ಬೀಸುತ್ತದೆ. ಅಂಥದ್ದೇ ಗಾಳಿಗೆ ಸಿಕ್ಕಿ ಒದ್ದಾಡುತ್ತಿರುವ ನಟಿ ಅನಿತಾ ಭಟ್. ಹಾಗೆ ನೋಡಿದರೆ ಇದು ಹದಿಹರೆಯದ ಪ್ರೇಮವಲ್ಲ. ನಡುವಯಸ್ಸಿನ ಪ್ರೇಮ! ನಾಯಕ ಸತೀಶ್. ಸತೀಶ್ ಚಿತ್ರರಂಗದಿಂದ ಆಚೆಗಿರುವ ವ್ಯಕ್ತಿ. ಇವರು ಪಿವಿಆರ್ನ ಪ್ರಾದೇಶಿಕ ಮ್ಯಾನೇಜರ್. ಹಾಗೆ ನೋಡಿದರೆ ಇವರಿಗೆ ಮದುವೆ ಆಗಿದೆ. ಅನಿತಾ ಭಟ್ ಅವರಿಗೂ ಮದುವೆ ಆಗಿ ಪತಿಯಿಂದ ವಿಚ್ಛೇದನ ಪಡೆದು ದೂರವಿ ದ್ದಾರೆ. ಅಲ್ಲದೆ ಇವರಿಗೆ ಪುತ್ರಿಯೂ ಇದ್ದಾರೆ. ಇಬ್ಬರೂ ನಡು ವಯಸ್ಸಿನವರು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸತೀಶ್ ಮತ್ತು ಅನಿತಾ ಭಟ್ ಪರಿಚಯವಾಗಿ ಆ ಸ್ನೇಹ ಪ್ರೀತಿಗೆ ತಿರುಗಿ ಕೊನೆಗೂ ಎರಡ್ಮೂರು ವರ್ಷ ಒಟ್ಟಿಗೆ ಒಂದೇ ಮನೆಯಲ್ಲಿ ಜೀವನ ಕೂಡ ಮಾಡಿದ್ದಾರೆ.
ಹೌದು, ನಾನು ಸತೀಶ್ ಪ್ರೀತಿಸಿ ಒಟ್ಟಿಗೆ ಜೀವನ ಮಾಡುತ್ತಿದ್ದು ನಿಜ. ನನ್ನ ಬಗ್ಗೆ ಅವರಿಗೆ ಎಲ್ಲವನ್ನೂ ಹೇಳಿಕೊಂಡಿದ್ದೆ. ಆದರೆ, ಅವರ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಅವರ ಮೊದಲೇ ಮದುವೆ ಆದ ಸುದ್ದಿ ನನಗೆ ತಡವಾಗಿ ಗೊತ್ತಾಯಿತು. ಆ ನಂತರ ನಮ್ಮಿಬ್ಬರ ನಡುವೆ ಜಗಳ ಆಗಿದ್ದು ನಿಜ. ಆದರೂ ಒಟ್ಟಿಗೆ ಜೀವನ ಮಾಡುವ ಉದ್ದೇಶ ನನಗೆ ಇತ್ತು. ಸತೀಶ್ ಅವರ ಮನೆಯವರ ಕಡೆಯಿಂದ ತುಂಬಾ ತೊಂದರೆಗಳಾಗುತ್ತಿದ್ದವು. ಈ ನಡುವೆ ಸತೀಶ್ ಇದ್ದಕ್ಕಿದಂತೆ ನನ್ನಿಂದ ದೂರವಾಗಿದ್ದಾರೆ. ಯಾಕೆಂಬುದು ಗೊತ್ತಿಲ್ಲ.
ವರದಿ: ಕನ್ನಡ ಪ್ರಭ
