ಅಸೆಂಬ್ಲಿ ಪ್ರವೇಶಿಸಿದ ಮೊದಲ ದಂಪತಿ ಎಚ್‌ಡಿಕೆ- ಅನಿತಾ

First Published 22, Mar 2018, 1:01 PM IST
Anita and kumarswamy was the only couple who entered assembly together in karnataka
Highlights

ರಾಜ್ಯದ ಇತಿಹಾಸದಲ್ಲೇ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಮೊದಲ ದಂಪತಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ.

ರಾಜ್ಯದ ಇತಿಹಾಸದಲ್ಲೇ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಮೊದಲ ದಂಪತಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ.

2008ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ರಾಮನಗರದಿಂದ ಆಯ್ಕೆಯಾಗಿದ್ದರು. ಮಧುಗಿರಿಯಲ್ಲಿ ಜೆಡಿಎಸ್‌ನಿಂದ ವಿಜೇತರಾಗಿದ್ದ ಗೌರಿಶಂಕರ್‌ ಅವರು ‘ಆಪರೇಷನ್‌ ಕಮಲ’ಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಉಪಚುನಾವಣೆ ಘೋಷಣೆಯಾದಾಗ ಜೆಡಿಎಸ್‌ ಪಕ್ಷ ಅನಿತಾ ಅವರನ್ನು ಕಣಕ್ಕಿಳಿಸಿತ್ತು. ಜಯಭೇರಿ ಬಾರಿಸಿದ ಅವರು 2009ರ ಜನವರಿಯಲ್ಲಿ ಕುಮಾರಸ್ವಾಮಿ ಅವರ ಜತೆ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದರು.

loader