ಎಸ್‌ಬಿಐ, ಎಚ್‌ಡಿಎಫ್‌ಸಿ, ಐಡಿಬಿಐ ಸೇರಿದಂತೆ 232 ಬ್ಯಾಂಕಿಂಗ್ ಮೊಬೈಲ್ ಆ್ಯಪ್‌ಗಳನ್ನು ಹೋಲುವ ಆ್ಯಂಡ್ರಾಯ್ಡ್ ವೈರಸ್‌ವೊಂದನ್ನು ಪತ್ತೆ ಹಚ್ಚಿರುವುದಾಗಿ ಸೈಬರ್ ಭದ್ರತೆ ಪರಿಹಾರ ಕಂಪನಿ ಕ್ವಿಕ್ ಹೀಲ್ ಗುರುವಾರ ಎಚ್ಚರಿಕೆ ನೀಡಿದೆ. ಆಂಡ್ರಾಯ್ಡ್ ಬ್ಯಾಂಕರ್ ಎ2ಎಫ್8 ಹೆಸರಿನ ವೈರಸ್ ನಕಲಿ ಫ್ಲಾಶ್ ಪ್ಲೇಯರ್ ಆ್ಯಪ್‌ಗಳ ಮೂಲಕ ಹರಿಬಿಡಲಾಗಿದೆ.
ನವದೆಹಲಿ(ಜ.05): ಎಸ್ಬಿಐ, ಎಚ್ಡಿಎಫ್ಸಿ, ಐಡಿಬಿಐ ಸೇರಿದಂತೆ 232 ಬ್ಯಾಂಕಿಂಗ್ ಮೊಬೈಲ್ ಆ್ಯಪ್ಗಳನ್ನು ಹೋಲುವ ಆ್ಯಂಡ್ರಾಯ್ಡ್ ವೈರಸ್ವೊಂದನ್ನು ಪತ್ತೆ ಹಚ್ಚಿರುವುದಾಗಿ ಸೈಬರ್ ಭದ್ರತೆ ಪರಿಹಾರ ಕಂಪನಿ ಕ್ವಿಕ್ ಹೀಲ್ ಗುರುವಾರ ಎಚ್ಚರಿಕೆ ನೀಡಿದೆ. ಆಂಡ್ರಾಯ್ಡ್ ಬ್ಯಾಂಕರ್ ಎ2ಎಫ್8 ಹೆಸರಿನ ವೈರಸ್ ನಕಲಿ ಫ್ಲಾಶ್ ಪ್ಲೇಯರ್ ಆ್ಯಪ್ಗಳ ಮೂಲಕ ಹರಿಬಿಡಲಾಗಿದೆ.
ಈ ಆ್ಯಪ್ ಡೌನ್ಲೋಡ್ ಮಾಡಿದ ಬಳಿಕ ಎಲ್ಲಾ ಆ್ಯಪ್ ಗಳನ್ನು ಪರಿಶೀಲಿಸಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಕದಿಯಲಾತ್ತದೆ. ಮೊಬೈಲ್ ಅನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸುವ ಆ್ಯಪ್ಗಳನ್ನು ಡೌನ್ಲೋಡ್ ಮಾಡದಂತೆ ಬಳಕೆದಾರರಿಗೆ ಕ್ವಿಕ್ ಹೀಲ್ ಸಲಹೆ ನೀಡಿದೆ.
