Asianet Suvarna News Asianet Suvarna News

ನಿರುದ್ಯೋಗಿಗಳಿಗೆ ಗುಡ್’ನ್ಯೂಸ್: ಇಂದಿನಿಂದ ಒಂದು ಸಾವಿರ ರುಪಾಯಿ ಭತ್ಯೆ

ಮುಖ್ಯಮಂತ್ರಿ ಯುವ ನೇಸ್ತಂ’ ಯೋಜನೆಯಡಿ ಯೋಜನೆಯ ವೆಬ್‌ವಾಹಿನಿಯಲ್ಲಿ ಈಗಾಗಲೇ ಸುಮಾರು 2 ಲಕ್ಷ ನಿರುದ್ಯೋಗಿಗಳು ನೋಂದಾಯಿತರಾಗಿದ್ದಾರೆ. ಸೂಕ್ತ ಉದ್ಯೋಗ ದೊರೆಯುವವರೆಗೆ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಭತ್ಯೆ ಲಭ್ಯವಾಗಲಿದೆ. 

Andhra Pradesh Unemployment Allowance Scheme To Begin today
Author
Amaravathi, First Published Oct 2, 2018, 9:25 AM IST

ಅಮರಾವತಿ[ಅ.02]: ಅರ್ಹ ನಿರುದ್ಯೋಗಿಗಳಿಗೆ ಮಾಸಿಕ 1,000 ರು. ನಿರುದ್ಯೋಗ ಭತ್ಯೆ ನೀಡುವ ಯೋಜನೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಇಂದು ಚಾಲನೆ ನೀಡಲಿದ್ದಾರೆ. 

‘ಮುಖ್ಯಮಂತ್ರಿ ಯುವ ನೇಸ್ತಂ’ ಯೋಜನೆಯಡಿ ಯೋಜನೆಯ ವೆಬ್‌ವಾಹಿನಿಯಲ್ಲಿ ಈಗಾಗಲೇ ಸುಮಾರು 2 ಲಕ್ಷ ನಿರುದ್ಯೋಗಿಗಳು ನೋಂದಾಯಿತರಾಗಿದ್ದಾರೆ. ಸೂಕ್ತ ಉದ್ಯೋಗ ದೊರೆಯುವವರೆಗೆ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಭತ್ಯೆ ಲಭ್ಯವಾಗಲಿದೆ. 

2014ರ ಚುನಾವಣೆಯ ವೇಳೆ ಟಿಡಿಪಿ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿತ್ತು. ಹಂತಹಂತವಾಗಿ 12 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ.

Follow Us:
Download App:
  • android
  • ios