ತೃತೀಯ ಲಿಂಗಿಗಳ ಜೀವನ ನಿರ್ವಹಣೆಗೆ ನೆರವು ನೀಡಲು ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದ್ದು, 18 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೆ ಪ್ರತಿ ತಿಂಗಳು 1500 ರು. ಪಿಂಚಣಿ ನೀಡಲಿದೆ.
ಅಮರಾವತಿ (ಡಿ.18): ತೃತೀಯ ಲಿಂಗಿಗಳ ಜೀವನ ನಿರ್ವಹಣೆಗೆ ನೆರವು ನೀಡಲು ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದ್ದು, 18 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೆ ಪ್ರತಿ ತಿಂಗಳು 1500 ರು. ಪಿಂಚಣಿ ನೀಡಲಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಹಿಜಡಾಗಳಿಗಾಗಿ ರೂಪಿಸಿದ ವಿಶೇಷ ಯೋಜನೆಗೆ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದಲ್ಲಿ 26,000 ಮಂದಿ ತೃತೀಯ ಲಿಂಗಿಗಳು ಇದ್ದು, ಅವರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ಈ ಯೋಜನೆಯ ಅಡಿ ಹಣಕಾಸು ಸ್ಥಿರತೆಗಾಗಿ ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಕೂಡ ನೀಡಲಾಗುತ್ತದೆ.
