ಬೆಂಗಳೂರು[ಮೇ. 19]  ತೃತೀಯರಂಗ ರಚನೆ ಕಸರತ್ತಿನಲ್ಲಿರುವ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗವಾಗುವಂತಹ ಸಮೀಕ್ಷೆ ಹೊರಬಿದ್ದಿದೆ.  ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಧೂಳಿಪಟ  ಆಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆಂಧ್ರ ವಿಧಾನಸಭೆಯಲ್ಲಿ ವೈ ಎಸ್ಆರ್ ಕಾಂಗ್ರೆಸ್ ಪಾರುಪತ್ಯ ಮೆರೆಯಲಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಜಗನ್ ಮೋಹನ್ ರೆಡ್ಡಿ ಪಕ್ಷಕ್ಕೆ ಅತಿಹೆಚ್ಚು ಸ್ಥಾನ ಸಿಗಲಿದೆ ಎಂದು ಹೇಳಿದೆ.

 ಟೈಮ್ಸ್ ನೌ -ವಿಎಂಆರ್ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಯದ್ದೇ ಹವಾ, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ..!

ಸಿಸಿಎಸ್ ಸರ್ವೆ ಪ್ರಕಾರ 133ರಿಂದ 135 ಸ್ಥಾನಗಳಲ್ಲಿ ವೈಎಸ್ಆರ್ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಆಡಳಿತಾರೂಢ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗವಾಗಲಿದ್ದು  ಆಂಧ್ರದಲ್ಲಿಕೇವಲ 37 ರಿಂದ 40 ಸ್ಥಾನಕ್ಕೆ ಟಿಡಿಪಿ ಕುಸಿಯಲಿದೆ ಎಂದು  ಸಿಸಿಎಸ್ ಸಂಸ್ಥೆ ಸಮೀಕ್ಷೆ ಹೇಳಿದೆ.

ಸಿಸಿಎಸ್ ಸಂಸ್ಥೆ ಸಮೀಕ್ಷೆ ವರದಿ
ಒಟ್ಟು- 175
ಟಿಡಿಪಿ-  37-40
ವೈಎಸ್‌ ಆರ್ - 133 - 135
ಇತರೆ- 2