ಅಯ್ಯೋ ವಿಧಿಯೇ..! ಫೋನ್’ನಲ್ಲಿ ಮಾತನಾಡುವ ಮುನ್ನ ಈ ಸ್ಟೋರಿ ಓದಿ

First Published 1, Aug 2018, 6:06 PM IST
Andhra Man Answers Phone Kept on Charge Dies of Electrocution
Highlights

ರೆಡ್ಡಿ ಪೋಷಕರು ಕಳೆದ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ರೆಡ್ಡಿ ಸರ್ಕಾರ ವಿಕಲಾಂಗಚೇತನರಿಗೆ ನೀಡುವ ಒಂದು ಸಾವಿರ ರುಪಾಯಿ ಪಿಂಚಣಿಯಲ್ಲೇ ಜೀವನ ಸಾಗಿಸುತ್ತಿದ್ದರು.

ಹೈದರಾಬಾದ್[ಆ.01]: ಮೊಬೈಲ್ ಫೋನ್ ಚಾರ್ಜ್’ಗೆ ಹಾಕಿ ಮಾತನಾಡುವಾಗ ಅವಘಡ ಸಂಭವಿಸುವ ಘಟನೆಗಳನ್ನು ಕೇಳುತ್ತಲೇ ಇರುತ್ತೇವೆ. ಅಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ವಾಗುಪಲ್ಲಿಯಲ್ಲಿ ನಡೆದಿದೆ.

31 ವರ್ಷದ ವಿಕಲಾಂಗಚೇತನ ವ್ಯಕ್ತಿಯಾದ ಚಂಗು ಮಸ್ತಾನ್ ರೆಡ್ಡಿ ಮೊಬೈಲ್ ಫೋನ್ ಚಾರ್ಜ್’ಗೆ ಹಾಕಿ ಮಾತನಾಡುತ್ತಿದ್ದಾಗ ವಿದ್ಯುತ್ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವಾಸನೆ ಗಮನಿಸಿದ ಸ್ಥಳೀಯರು ಮಸ್ತಾನ ರೆಡ್ಡಿ ಮನೆಗೆ ಬಂದಾಗ ವಿದ್ಯುತ್ ಶಾಕ್’ನಿಂದ ಬಿದ್ದಿದ್ದ ಆತನನ್ನು ಆಸ್ಫತ್ರೆಗೆ ಕರೆದೊಯ್ಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರೆಡ್ಡಿ ಪೋಷಕರು ಕಳೆದ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ರೆಡ್ಡಿ ಸರ್ಕಾರ ವಿಕಲಾಂಗಚೇತನರಿಗೆ ನೀಡುವ ಒಂದು ಸಾವಿರ ರುಪಾಯಿ ಪಿಂಚಣಿಯಲ್ಲೇ ಜೀವನ ಸಾಗಿಸುತ್ತಿದ್ದರು.

ಒಟ್ಟಿನಲ್ಲಿ ಮೊಬೈಲ್ ಚಾರ್ಜ್ ಹಾಕಿ ಫೋನ್’ನಲ್ಲಿ ಮಾತನಾಡುವವರು ಇನ್ನಾದರೂ ಎಚ್ಚರದಿಂದ ಇರುವುದು ಕ್ಷೇಮ. 

loader