ಅಮರಾವತಿ[ಅ.20]: ಆಂಧ್ರಪ್ರದೇಶದ ಉದ್ಯೋಗಾಂಕ್ಷಿಗಳಿಗೆ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಸಿಹಿಸುದ್ದಿ ನೀಡಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆಸಲಾಗುತ್ತಿದ್ದ ಸಂದರ್ಶನವನ್ನು ರದ್ದು ಮಾಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.

ಮಾಧ್ಯಮಗಳಿಗೆ ಜಗನ್‌ ಸರ್ಕಾರ ಮೂಗುದಾರ!

2020ರ ಜನವರಿಯಿಂದ ಸರ್ಕಾರದ ಯಾವುದೇ ಹುದ್ದೆಗಳ ನೇಮಕಾತಿಗೆ ಸಂದರ್ಶನವನ್ನು ನಡೆಸದೇ, ಪರೀಕ್ಷೆಯೊಂದನ್ನೇ ಮಾನದಂಡವಾಗಿ ಪರಿಗಣಿಸಿ ನೇಮಕಾತಿ ಮಾಡಬೇಕು ಎಂದು ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಪ್ರಾಧಿಕಾರಕ್ಕೆ(ಎಪಿಪಿಎಸ್‌ಸಿ)ಸೂಚಿಸಿದೆ. ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ ಪರೀಕ್ಷೆ ಬಳಿಕ ಸಂದರ್ಶನ ನಡೆಸಲಾಗುತ್ತಿತ್ತು. ಆದರೆ, ಸಂದರ್ಶನದಲ್ಲಿ ಅಧಿಕಾರಿಗಳ ಭ್ರಷ್ಟಾಚಾರದಿಂದ ನೈಜ ವಿದ್ಯಾರ್ಥಿಗಳು ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಉದ್ಯೋಗದ ಬೆನ್ನಲ್ಲೇ ಮತ್ತೊಂದು ದಸರಾ ಗಿಫ್ಟ್: ಆಟೋ, ಕ್ಯಾಬ್​ ಚಾಲಕರಿಗೆ ಬಂಪರ್!

ಇದನ್ನು ಮಟ್ಟಹಾಕಲು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಆಂಧ್ರಪ್ರದೇಶ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ. ಕೇಂದ್ರ ಸರ್ಕಾರದ ಬಿ, ಸಿ, ಡಿ ಹಂತದ ಗೆಜೆಟೆಡ್‌ ಅಲ್ಲದ ಹುದ್ದೆಗಳಿಗೆ ಸಂದರ್ಶನವನ್ನು ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2016ರಲ್ಲಿ ಆದೇಶಿಸಿತ್ತು.

ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!