ಕ್ಯಾನ್ಸರ್ ಪೀಡಿತ ಬಾಲಕನಿಗಾಗಿ ಕಾರಿನಿಂದ ಇಳಿದ ಸಿಎಂ| ಭದ್ರತಾ ಕಾರುಗಳನ್ನು ನಿಲ್ಲಿಸಿ ಬಾಲಕನ ಕುಟುಂಬ ಭೇಟಿಯಾದ ಸಿಎಂ| ಆಂಧ್ರ ಸಿಎಂ ಮಾನವೀಯತೆಗೆ ಎಲ್ಲೆಡೆ ಭಾರೀ ಮೆಚ್ಚುಗೆ| ಬಾಲಕನ ಚಿಕಿತ್ಸೆಗಾಗಿ 20 ಲಕ್ಷ ರೂ. ಆರ್ಥಿಕ ಸಹಾಯ ಘೋಷಿಸಿದ ಜಗನ್ ಮೋಹನ್ ರೆಡ್ಡಿ|

ಹೈದರಾಬಾದ್(ಜೂ.05): ಆಂಧ್ರದ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ಕಾರ್ಯವೈಖರಿಯಿಂದ ಈಗಾಗಲೇ ಜನಮಾನಸದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಆಂಧ್ರದ ಶಾರದಾ ಪೀಠಕ್ಕೆ ಭೇಟಿ ನೀಡಿದ್ದ ಜಗನ್, ವಿಮಾನ ನಿಲ್ದಾಣ ಮಾರ್ಗದಲ್ಲಿ ಕ್ಯಾನ್ಸರ್ ಪೀಡಿತ ಬಾಲಕನನ್ನು ತಮ್ಮ ಕಾರಿನಿಂದ ಇಳಿದು ಭೇಟಿಯಾದ ಪ್ರಸಂಗ ನಡೆದಿದೆ.

15 ವರ್ಷದ ನೀರಜ್ ಎಂಬ ಬಾಲಕ ಲ್ಯುಕೆಮಿಯಾ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಜಗನ್ ತೆರಳುತ್ತಿದ್ದ ದಾರಿಯಲ್ಲಿ ಆತನ ಗೆಳೆಯರು ನೀರಜ್ ಚಿಕಿತ್ಸೆಗೆ ನೆರವಾಗುವಂತೆ ಭಿತ್ತಿಪತ್ರ ಪ್ರದರ್ಶಿಸಿದ್ದಾರೆ.

ಇದನ್ನು ಕಂಡ ಜಗನ್ ಕೂಡಲೇ ತಮ್ಮ ಕಾರಿನಿಂದ ಇಳಿದು ನೀರಜ್ ಗೆಳೆಯರು ಮತ್ತು ಆತನ ಕುಟುಂಬವನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ನೀರಜ್ ಚಿಕಿತ್ಸೆಗಾಗಿ 25 ಲಕ್ಷ ರೂ.ಗಳ ಅವಶ್ಯಕತೆ ಇದ್ದು, ಇದುವರೆಗೂ ಕೇವಲ 40 ಸಾವರಿ ರೂ.ಗಳನ್ನಷ್ಟೇ ಹೊಂದಿಸಲು ಸಾಧ್ಯವಾಗಿದೆ. ಇದನ್ನರಿತ ಜಗನ್ ಸ್ಥಳದಲ್ಲೇ ನೀರಜ್ ಚಿಕಿತ್ಸೆಗಾಗಿ ರಾಜ್ಯ ಸರ್ಕಾರದಿಂದ 20 ಲಕ್ಷ ರೂ.ಗಳ ಆರ್ಥಿಕ ಸಹಾಯ ಘೋಷಿಸಿದರು.