ಸಾವಿನಲ್ಲೂ ಸಾರ್ಥಕತೆ ಮೆರೆದ ಮೃತ ಚಂದನ್ ಕುಟುಂಬ

Anchor Chandan family family decided to donate the eyes
Highlights

ಮೃತ ನಿರೂಪಕ ಚಂದನ್ ಪತ್ನಿ ವೀಣಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಚಂದನ್ ಕುಟುಂಬ ಮೀನಾ ಅವರ ಕಣ್ಣುಗಳನ್ನ ದಾನ ಮಾಡಲು ನಿರ್ಧರಿಸಿದೆ.

ಬೆಂಗಳೂರು(ಜೂನ್.1): ನಿರೂಪಕ ಚಂದನ್ ಸಾವಿನಿಂದ ಮನನೊಂದು ಮಗನನ್ನ ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಪತ್ನಿ ಮೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಿನ್ನೆ ಮಗ ತುಷಾರ್ ಕಣ್ಣುಗಳನ್ನ ದಾನ ಮಾಡಿದ ಚಂದನ್ ಕುಟುಂಬ ಇದೀಗ ಮೀನಾ ಕಣ್ಣುಗಳನ್ನ ಲಯನ್ಸ್ ಕ್ಲಬ್ ನೇತ್ರಾ ಲಯಕ್ಕೆ ದಾನ ಮಾಡಿದ್ದಾರೆ. 

ಕಳೆದ ಮೇ 24 ರಂದು ದಾವಣೆಗೆರೆ ಬಳಿ ಕಾರು ಅಪಘಾತದಲ್ಲಿ ನಿರೂಪಕ ಚಂದನ್ ಸಾವನ್ನಪ್ಪಿದ್ದರು. ಇದರಿಂದ ಮನನೊಂದ ಪತ್ನಿ ಮೀನಾ, 13 ವರ್ಷಗದ ಮಗ ತುಷಾರ್ ಕತ್ತು ಕೊಯ್ದು, ತಾನು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಮೀನಾ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಸಾವನ್ನಪ್ಪಿದ್ದಾರೆ. ಸಾವಿನ ನೋವಿನಲ್ಲೂ ಚಂದನ್ ಕುಟುಂಬಸ್ಥರು ಮಗ ತುಷಾರ್ ಹಾಗೂ ಮೀನಾ ಕಣ್ಣುಗಳನ್ನ ದಾನ ಮಾಡಿದ್ದಾರೆ.  ಮೀನಾ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮ ದೋಡ್ಡಬಳ್ಳಾಪುರಕ್ಕೆ ಮೃತದೇಹವನ್ನ ಕೊಂಡಯ್ಯಲಿದ್ದಾರೆ. 

ಕಾರು ಅಪಘಾತದಲ್ಲಿ ಮೃತಪಟ್ಟ ನಿರೂಪಕ ಚಂದನ್ ಪತ್ನಿ ಆತ್ಮಹತ್ಯೆಗೆ ಯತ್ನ

ಚಂದನ್ ಉದಯ ಮ್ಯೂಸಿಕ್, ಕಸ್ತೂರಿ ಸೇರಿದಂತೆ ವಿವಿಧ ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಅತ್ಯಂತ ಸುಲಲಿತವಾಗಿ ಕನ್ನಡ ಮಾತನಾಡುತ್ತಿದ್ದ ಅವರು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. 

ಭೀಕರ ಅಪಘಾತ : ನಿರೂಪಕ ಚಂದನ್ ಸಾವು

ಚಂದನ್ ಉದಯ ಮ್ಯೂಸಿಕ್, ಕಸ್ತೂರಿ ಸೇರಿದಂತೆ ವಿವಿಧ ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಅತ್ಯಂತ ಸುಲಲಿತವಾಗಿ ಕನ್ನಡ ಮಾತನಾಡುತ್ತಿದ್ದ ಅವರು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. 


 

loader