ಕಾರವಾರ[ಮಾ. 12] ರಾಹುಲ್ ಗಾಂಧಿ ವಿರುದ್ಧ ಅನಂತಕುಮಾರ ಹೆಗಡೆ ಟೀಕಾ ಪ್ರಹಾರ ಮಾಡಿದ್ದಾರೆ.ರಫೆಲ್ ಬಗ್ಗೆ ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ. ಮೂರು ಚಕ್ರದ ಸೈಕಲ್ ಎಂದು ಆ ಮನುಷ್ಯ ತಿಳಿದಿದ್ದಾನೆ ಎಂದು ವಾಗ್ದಾಳಿ ಮಾಡಿದರು.

ರಾಹುಲ್ ಈ ಪಾಂಡಿತ್ಯದ ಬಗ್ಗೆ  ನಾನು ಚರ್ಚೆ ಮಾಡಲ್ಲ. ರಾಜಕೀಯವಾಗಿ ಏನೇ ಮಾಡಲಿ ಆದರೆ ದೇಶದ ಸೈನ್ಯ ಬಳಸಿಕೊಂಡು ರಾಜಕಾರಣ ಮಾಡಬೇಡಿ.  ಸೈನ್ಯವನ್ನು ಇಟ್ಟು ನಾವು ರಾಜಕೀಯ ಮಾಡುತ್ತಿಲ್ಲ ಎಂದು ಕಾರವಾರ ತಾಲೂಕಿನ ಕಿನ್ನರದಲ್ಲಿ ಹೇಳಿದ್ದಾರೆ.

ಮುಸಲ್ಮಾನನ ಮಗ ಗಾಂಧಿ ಹೇಗಾದ? ಹೆಗಡೆಗೆ ಸೋಶಿಯಲ್ ಮೀಡಿಯಾ ಛೀಮಾರಿ

ನಾವು ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ರಾಜಕಾರಣದ ಹೆಸರಿನಲ್ಲಿ ಯೋಧರ ಶಕ್ತಿ ಕುಂದಿಸುವ ಕೆಲಸ ಮಾಡಬಾರದು ಎಂದು ಹೇಳಿದರು.