ಕಾರವಾರ(ಮಾ. 11)  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಹುಲ್ ಗಾಂಧಿ ಅವರ ಡಿಎನ್ ಎ ಪರೀಕ್ಷೆ ಬಗ್ಗೆ ಹೆಗಡೆ ಮಾತನಾಡಿದ್ದರು.  ಮೊದಲು ಅನಂತ್ ಕುಮಾರ್ ಡಿಎನ್ಎ ಪರೀಕ್ಷೆ ಮಾಡಿಕೊಳ್ಳಲಿ ಎಂದು ನಾಗರಿಕರು ಕಿಡಿ ಕಾರಿದ್ದಾರೆ.

ತಂದೆ ಮುಸಲ್ಮಾನ ತಾಯಿ ಕ್ರಿಶ್ಚಿಯನ್ ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾದ ಎಂದು ಹೆಗಡೆ ಪ್ರಶ್ನೆ ಮಾಡಿದ್ದರು.  ರಾಜೀವ್ ಗಾಂಧಿ ಹತ್ಯೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ ಮಾಡಿಸಿರಲಿಲ್ಲ. ಬದಲಾಗಿ ಪ್ರೀಯಾಂಕ ವಾದ್ರಾ ಡಿಎನ್ಎ ಪರೀಕ್ಷೆ ಮಾಡಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಹಿಂದು ಹೆಣ್ಣನ್ನು ಮುಟ್ಟಿದ್ದೇನೆ, ತಾಕತ್ತಿದ್ರೆ...ಅನಂತ್‌ಗೆ ಚಾಲೆಂಜ್!

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜಾಲತಾಣಿಗರು, ಮೊದಲು ಅನಂತ್ ಕುಮಾರ್ ಹೆಗಡೆ ಡಿಎಲ್‌ ಎ ಪರೀಕ್ಷೆ ಮಾಡಿಸಬೇ, ಕೇಂದ್ರ ಸಚಿವರಿಗೆ ಮತಿಭ್ರಮಣೆಯಾಗಿದೆ, ಬಿಜೆಪಿ ಕಚೇರಿಯಲ್ಲಿ ರಕ್ತ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಅಣಕವಾಡಿದ್ದಾರೆ.