- ಸಂವಿಧಾನ ತಿದ್ದಲು ನಾವು ಬಂದಿದ್ದೇವೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕ ನೀಡಿದ್ದ ಕೇಂದ್ರ ಸಚಿವ- ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಪಕ್ಷಗಳ ವಿರೋಧ.- ಚಳಿಗಾಲದ ಅಧಿವೇಶನದಲ್ಲಿ ಕ್ಷಮೆಯಾಚಿಸದ ಸಚಿವ.
ಬೆಂಗಳೂರು: 'ಸಂವಿಧಾನವೇ ನನಗೆ ಸುಪ್ರೀಂ,' ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದ್ದು, ಸಂವಿಧಾನ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿದ್ದಾರೆ.
'ನನ್ನ ಹೇಳಿಕೆಯಿಂದ ಯಾರಿಗಾದರೂ ಅಪಮಾನವಾಗಿದ್ದರೆ ಅಥವಾ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ,' ಎಂದು ಹೇಳಿದರು.
'ಜಾತ್ಯತೀತರು ಎಂದು ಹೇಳಿಕೊಳ್ಳುವವರಿಗೆ ಅವರ ಅಪ್ಪ-ಅಮ್ಮನ ರಕ್ತದ ಪರಿಚವಯೇ ಇರುವುದಿಲ್ಲ, ನಾವು ಸಂವಿಧಾನವನ್ನು ಬದಲಿಸುತ್ತೇವೆ, ಅದಕ್ಕೇ ಬಂದಿದ್ದೇವೆ,' ಎಂದ ಅನಂತ ಕುಮಾರ್ ಹೆಗಡೆ ಹೇಳಿಕೆ ವಿಪರೀತ ಟೀಕೆಗೆ ಗುರಿಯಾಗಿತ್ತು.
ಹೆಗಡೆ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಆದಿಯಾದಿ ಪ್ರತಿಪಕ್ಷಗಳು ಸಚಿವರ ಹೇಳಿಕೆ ವಿರುದ್ಧ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದವು.
ಚಳಿಗಾಲದ ಅಧಿವೇಶನ ನಡೆಯುತ್ತಿರುವ ಉಭಯ ಸದನಗಳಲ್ಲೂ ಬುಧವಾರ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಹೆಗಡೆ ಬೆಂಬಲಕ್ಕೆ ನಿಲ್ಲದ ಸರಕಾರ, ಸಚಿವರ ಹೇಳಿಕೆಯಿಂದ ದೂರ ಸರಿದಿತ್ತು.
