"ಓಟಿಗಾಗಿ ಯಾರ ಬೂಟು ಬೇಕಾದರೂ ಸಿದ್ದರಾಮಯ್ಯ ನೆಕ್ಕುತ್ತಾರೆ" ಸಿಎಂ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜ್ಯ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಹೇಳಿದ್ದಾರೆ.
ಬೆಳಗಾವಿ (ನ.17): "ಓಟಿಗಾಗಿ ಯಾರ ಬೂಟು ಬೇಕಾದರೂ ಸಿದ್ದರಾಮಯ್ಯ ನೆಕ್ಕುತ್ತಾರೆ" ಸಿಎಂ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜ್ಯ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಹೇಳಿದ್ದಾರೆ.
ಓಟಿನ ಆಸೆಗೆ ಸಿಎಂ ಏನನ್ನೂ ಬೇಕಾದರೂ ಮಾಡುತ್ತಾರೆ ಎಂದು ಕಿತ್ತೂರಿನಲ್ಲಿ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಭಯೋತ್ಪಾದಕರಿಗೆ ಕರ್ನಾಟಕ ಸೇಫ್ ಜೋನ್. ನಾಲ್ಕುವರೆ ಲಕ್ಷ ಬಾಂಗ್ಲಾದೇಶ ವಲಸಿಗರು ಬೆಂಗಳೂರಿನಲ್ಲಿ ಇದ್ದಾರೆ. ಇವರು ಬೆಳಗಾವಿ, ವಿಜಯಪುರ ಹೀಗೆ ಎಲ್ಲ ಕಡೆ ಜೋಳಿಗೆ ಹಾಕಿಕೊಂಡು ಓಡಾಡುತ್ತಾರೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಮೊನ್ನೆ ಟಿಪ್ಪು ಜಯಂತಿ ಆಚರಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಕಿತ್ತೂರು ಉತ್ಸವಕ್ಕೆ ಬರುವುದಕ್ಕೆ ಆಗುವುದಿಲ್ಲ. ಏಕೀಕರಣಕ್ಕೆ ಶ್ರಮಿಸಿದವರು ನೆನಪಾಗಲ್ಲ.ಆಲೂರು ವೆಂಕಟರಾಯರು, ರನ್ನ, ಜನ್ನ, ಕುವೆಂಪು ನೆನಪಾಗಲ್ಲ. ಇವರಿಗೆ ನೆನಪಾಗುವುದು ಟಿಪ್ಪು ಮಾತ್ರ ಎಂದು ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಮತ್ತೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ಇವನು ಕಸಬ್, ಓಸಾಮಾಬಿನ್ ಲಾಡನ್ ಹಾಗೂ ಟಿಪ್ಪು ಅಪ್ಪ ಹೈದರಾಲಿ ಜಯಂತಿ ಮಾಡಿಸುತ್ತಾನೆ. ಇಡೀ ಜಗತ್ತಿನಲ್ಲಿ ಇರುವ ಎಲ್ಲ ಭಯೋತ್ಪಾದಕರಿಗೆ ಮೇಣದ ಬತ್ತಿ ಹಚ್ಚುವಂತೆ ಸಿದ್ದರಾಮಯ್ಯ ಹೇಳ್ತಾನೆ ಎಂದು ಸಿಎಂ ವಿರುದ್ಧ ಅನಂತಕುಮಾರ್ ವಾಗ್ದಾಳಿ ಮಾಡಿದರು.
