Asianet Suvarna News Asianet Suvarna News

'ಸುಳ್ಳು, ವಿಕೃತ ಸುದ್ಧಿ ಹರಡುವವರಿಗೆ ಕಾನೂನಿನ ಮೂಲಕವೇ ಉತ್ತರ'

ಸುಳ್ಳು, ವಿಕೃತ ಸುದ್ಧಿ ಹರಡುವವರಿಗೆ ಕಾನೂನಿನ ಮೂಲಕವೇ ಉತ್ತರ ನೀಡಲಿದ್ದೇವೆ ಎಂದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ,  ಜನರ ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ ಎಂದು ಹೇಳಿದ್ದಾರೆ.

Ananth Kumar Hegde Presses Action Against Followers of Siddaramaiah

ಬೆಂಗಳೂರು: ಸುಳ್ಳು, ವಿಕೃತ ಸುದ್ಧಿ ಹರಡುವವರಿಗೆ ಕಾನೂನಿನ ಮೂಲಕವೇ ಉತ್ತರ ನೀಡಲಿದ್ದೇವೆ ಎಂದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ,  ಜನರ ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲ-ತಾಣಗಳಲ್ಲದೆ ಬೇರೆ-ಬೇರೆ ವೇದಿಕೆಗಳಲ್ಲಿ, ಜನತೆಯನ್ನು ದಾರಿ ತಪ್ಪಿಸುತ್ತಿರುವ ಎಡ-ಬಿಡಂಗಿಗಳನ್ನು ಸಹ ನ್ಯಾಯಾಲಯಕ್ಕೆ ಎಳೆಯುತ್ತಿದ್ದೇನೆ. ಜನರ ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ, ಎಂದು ಹೆಗಡೆ ಟ್ವೀಟಿಸಿದ್ದಾರೆ.

ಕಳೆದ ಡಿ.21ರಂದು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ  ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ  ಹಾಗೂ ಪ್ರಚೋದನಾತ್ಮಕವಾಗಿ ಪೋಸ್ಟ್’ಗಳನ್ನು ಹಾಕಿಕೊಂಡಿರುವ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅದನ್ನು ಟ್ವೀಟ್’ನಲ್ಲಿ ಹೆಗಡೆ ಉಲ್ಲೇಖಿಸಿದ್ದಾರೆ.

ಈ ವ್ಯಕ್ತಿಗಳು ಫೇಸ್ ಬುಕ್ ಮತ್ತು ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕರ ಹೇಳಿಕೆಗಳನ್ನು ನೀಡಿದ್ದು, ಸುಳ್ಳು ಸುದ್ದಿ ಸೃಷ್ಟಿಸಿ ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಇರುವ ಸಾಮರಸ್ಯ ಕೆಡಿಸುತ್ತಿದ್ದಾರೆ.  ಜನತೆಯನ್ನು ದಾರಿ ತಪ್ಪಿಸಲು ಸೋಗಲಾಡಿ ಸಿದ್ಧ ಸರಕಾರವೇ ಇಂತಹ ವ್ಯಕ್ತಿಗಳ ಹಿಂದೆ ನಿಲ್ಲುತ್ತಿರುವುದರಿಂದ ನಾನು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ.  ಸರ್ಕಾರವೇ ನಮ್ಮದು ಎಂದು ಅಹಂನಿಂದ ವರ್ತಿಸುತ್ತಿರುವ ಈ ಮೂರ್ಖಶಿಖಾಮಣಿಗಳಿಗೆ ಕಾನೂನಿನ ರುಚಿ ತೋರಿಸಲೇಬೇಕಾದ ಅನಿವಾರ್ಯತೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದು.  ಈ ಶತಮೂರ್ಖರು ಎಷ್ಟೇ ದೊಡ್ಡವರಾದರು ಸಹ ಅವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.  ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಸಾಮಾಜಿಕ ಜಾಲ-ತಾಣಗಳಲ್ಲದೆ  ಬೇರೆ-ಬೇರೆ ವೇದಿಕೆಗಳಲ್ಲಿ, ಜನತೆಯನ್ನು ದಾರಿ ತಪ್ಪಿಸುತ್ತಿರುವ ಎಡ-ಬಿಡಂಗಿಗಳನ್ನು ಸಹ ನ್ಯಾಯಾಲಯಕ್ಕೆ ಎಳೆಯುತ್ತಿದ್ದೇನೆ.  ಜನರ  ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ.  ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಇದೊಂದು ಮುನ್ನೆಚ್ಚರಿಕೆಯಾಗಲಿ!. ಎಂದು ತಮ್ಮ ಬ್ಲಾಗ್’ನಲ್ಲಿ ಹೆಗಡೆ ಬರೆದುಕೊಂಡಿದ್ದಾರೆ.

ಶ್ರೇಯಸ್ ಮರಳ್ಳಿಗೌಡ ಹಾಗೂ ಆನಂದ ರಾಮಣ್ಣ ಎಂಬ  ಇಬ್ಬರೂ ಫೇಸ್ಬುಕ್’ಗಳಲ್ಲಿ ತನ್ನ ವಿರುದ್ಧ ನಿಂದನಾತ್ಮಕ  ಹಾಗೂ ಪ್ರಚೋದನಾತ್ಮಕವಾಗಿ, ಜಾತಿಗಳ ನಡುವೆ ಮತೀಯ ದ್ವೇಷ ಟುಮಾಡುವ ಉದ್ದೇಶದಿಂದ ಸಂದೇಶಗಳನ್ನು ತಯಾರಿಸಿ ಹರಿಯಬಿಟ್ಟಿರುತ್ತಾರೆ ಎಂದು ಸುರೇಶ್ ಶೆಟ್ಟಿ ಎಂಬವರು ಶಿರಸಿಯ ನ್ಯೂಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದರು.

‘ಅನಂತ್ ಕುಮಾರ್ ಹೆಗಡೆ ಒಬ್ಬ ಧರ್ಮದ ನಶೆ ಏರಿಸಿಕೊಂಡು ಅಮಲಿನಲ್ಲಿ ಪ್ರಜ್ಞೆ ಕಳೆದುಕೊಂಡಿರುವ ಕುಡುಕ ಇದ್ದಂತೆ... ಅವನಿಗೆ ಯಾವ ಸಮಯದಲ್ಲಿ ಏನು ಮಾತನಾಡುತ್ತೇನೆ ಎಂದು ಕನಿಷ್ಟ ಪ್ರಜ್ಞೆ ಕೂಡಾ ಇರಲ್ಲ... ಅವನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ  ಕುಡುಕ ಬಾಯಿ ಬಿಟ್ರೆ ಹೊಲೆಸು ಕೊಚ್ಚೆ.. ಬಿಜೆಪಿಯವರು ಅವನು ಹಾಗೆ ಬೊಗಳಲಿ ಅಂತಾನೇ ಸಚಿವ ಮಾಡ್ಬಿಟ್ಟಿದ್ದಾರೆ... ನಮ್ಕಡೆ ಈ ಕುಡುಕರಿಗೆ ಕುಡಿಸಿ ರೌಡಿಸಂ ಮಾಡಲಿಕ್ಕೆ ಚೂ ಬಿಡ್ತಾರೆ... ಹಾಗೆಯೇ ಈ ಹೆಗಡೆ  ಕೂಡ ಒಬ್ಬ ನಶೆಯಲ್ಲಿರುವ ಬೀದಿ ಪುಡಿ ರೌಡಿ..’ ಎಂದು ಅವಹೇಳನಕಾರಿಯಾಗಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

Follow Us:
Download App:
  • android
  • ios