ತುಮಕೂರು [ಜು.2] : ಕಾಂಗ್ರೆಸ್ ಗೆ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಸ್ಪೀಕರ್ ಇದನ್ನು ಕನ್ಫರ್ಮ್ ಮಾಡಿಲ್ಲ. ಆದರೆ ಇದರಲ್ಲಿ ಸತ್ಯ ಇರಬಹುದು  ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. 

ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್,  ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಇದರಿಂದ ಸರ್ಕಾರದ ಸಂಖ್ಯಾಬಲವೂ ಕೂಡ ಕುಸಿಯುವುದಿಲ್ಲ  ಎಂದರು. 

‘ಕೈ’ ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!

ಶಾಸಕ ಆನಂದ್ ಸಿಂಗ್ ಅವರು ಜಿಂದಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನೂ ಕೂಡ ನಮ್ಮ ಜೊತೆ ಮಾಡಿಲ್ಲ. ಈ ಸಂಬಂಧ ಈಗಾಗಲೇ ಉಪ ಸಮಿತಿ ರಚಿಸಿದ್ದೇವೆ. ಅವರ ಬಳಿ ಏನೂ ಹೇಳಿಲ್ಲ ಎಂದರು. 

ನಮಗಿರುವ ಮಾಹಿತಿ ಪ್ರಕಾರವಾಗಿ ಆಪರೇಷನ್ ಕಮಲ ನಡೆಯುತ್ತಿದೆ ಎನ್ನಲಾಗುತ್ತದೆ. ಆನಂದ್ ಸಿಂಗ್ ಜೊತೆ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ. ಕೇಂದ್ರದಿಂದ ಆಪರೇಷನ್ ಕಮಲ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇದೆ.  ಬಿಜೆಪಿಯಲ್ಲಿ ಉಸಿರುಕಟ್ಟುವ ವಾತಾವರಣ  ಇದೆ ಅನ್ನುವ ಬಿಜೆಪಿ ಶಾಸಕರು ಇದ್ದಾರೆ. ಅವರು ನಮ್ಮ ಬಳಿ ಅಸಮಾದಾನ ತೋಡಿಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು.