2022ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಭಾರತೀಯ! ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷಣೆ! ಇಸ್ರೋ ಯೋಜನೆ ಬಿಚ್ಚಿಟ್ಟ ಪ್ರಧಾನಿ ಮೋದಿ! ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಟ ಸನಿಹ! ಭಾರತೀಯ ವಿಜ್ಞಾನಿಗಳ ಸಾಧನೆ ಅನುಕರಣೀಯ

ನವದೆಹಲಿ(ಆ.15): ಬಾಹ್ಯಾಕಾಶಕ್ಕೆ ಭಾರತೀಯರನ್ನು ರವಾನೆ ಮಾಡುವ ಮೂಲಕ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. 

ಈ ವೇಳೆ ಬಾಹ್ಯಾಕಾಶ ರಂಗದಲ್ಲಿ ಅನ್ವೇಷಣೆಯಲ್ಲಿ ತೊಡಗಿರುವ ಮತ್ತು ಸಾಧನೆ ಮಾಡುತ್ತಿರುವ ವಿಜ್ಞಾನಿಗಳನ್ನು ಭಾರತ ಅಭಿನಂದಿಸುತ್ತದೆ. 2022ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಅಂತರಿಕ್ಷದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ನಾವು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

Scroll to load tweet…

ದೇಶದ ಅಭಿವೃದ್ಧಿಯ ವಿಚಾರಗಳನ್ನೇ ಹೆಚ್ಚು ಪ್ರಸ್ತಾಪಿಸಿದ ಮೋದಿ, ಭಾರತ ಈಗ ಅಭಿವೃದ್ಧಿಯ ನೆಲ ಎಂದು ಬಣ್ಣಿಸಿದರು. ವಿಶ್ವಕ್ಕೆ ಇದೀಗ ಭಾರತದ ಅವಶ್ಯಕತೆ ಇದ್ದು, ವಿಶ್ವಕ್ಕೆ ಭಾರತೀಯರು ತಮ್ಮ ಜ್ಞಾನವನ್ನು ರಫ್ತು ಮಾಡುವ ಮೂಲಕ ಭಾರತದ ಹೆಸರನ್ನು ಅಜರಾಮರಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.