ತ್ರಿವಳಿ ತಲಾಖ್ ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಎರಡು ತಿಂಗಳ ಬೆನ್ನಲ್ಲೇ, ಅಲಿಗಢ ಮುಸ್ಲಿಂ ವಿವಿಯ ಪ್ರಾಧ್ಯಾಪಕರೊಬ್ಬರು ತಮ್ಮ ಪತ್ನಿಗೆ ವಾಟ್ಸ್‌ಆಪ್ ಹಾಗೂ ಎಸ್‌ಎಂಎಸ್ ಮೂಲಕ ತಲಾಖ್ ನೀಡಿದ್ದಾರೆ.
ಆಗ್ರಾ: ತ್ರಿವಳಿ ತಲಾಖ್ ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಎರಡು ತಿಂಗಳ ಬೆನ್ನಲ್ಲೇ, ಅಲಿಗಢ ಮುಸ್ಲಿಂ ವಿವಿಯ ಪ್ರಾಧ್ಯಾಪಕರೊಬ್ಬರು ತಮ್ಮ ಪತ್ನಿಗೆ ವಾಟ್ಸ್ಆಪ್ ಹಾಗೂ ಎಸ್ಎಂಎಸ್ ಮೂಲಕ ತಲಾಖ್ ನೀಡಿದ್ದಾರೆ.
ಇದರ ವಿರುದ್ಧ ಸಿಡಿದೆದ್ದಿರುವ ಪತ್ನಿ, ತನಗೆ ನ್ಯಾಯ ಕೊಡಿಸದಿದ್ದರೆ ಕುಲಪತಿಗಳ ಮನೆ ಎದುರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ.
ಅಲಿಗಢ ಮುಸ್ಲಿಂ ವಿವಿಯ ಖಾಲಿದ್ ಬಿನ್ ಜತೆ 27 ವರ್ಷಗಳಿಂದ ಸಂಸಾರ ನಡೆಸಿಕೊಂಡು ಬಂದಿದ್ದೇನೆ. ಆದರೆ ಅವರು ವಾಟ್ಸ್ಆಪ್ ಹಾಗೂ ಎಸ್ಎಂಎಸ್ ಮೂಲಕ ತಲಾಖ್ ನೀಡಿದ್ದಾರೆ ಎಂದು ಖಾಲಿದ್’ರ ಪತ್ನಿ ಯಾಸಿನ್ ಆರೋಪಿಸಿದ್ದಾರೆ.
ಆದರೆ ಪತ್ನಿಯಿಂದ ಕಿರುಕುಳ ಅನುಭವಿಸಿದ್ದೇನೆ. ವಾಟ್ಸ್ಆಪ್, ಎಸ್ಎಂಎಸ್ ಮೂಲಕವಷ್ಟೇ ಅಲ್ಲ, ಇಬ್ಬರ ವ್ಯಕ್ತಿಗಳ ಮುಂದೆಯೂ ತಲಾಖ್ ಹೇಳಿದ್ದೇನೆ ಎಂದಿದ್ದಾರೆ.
