ತಾನು ಜಯಲಲಿತಾ ಹಾಗೂ ಶೋಭನ್ ಬಾಬು ಮಗಳೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ  ಅಮೃತಾಳೆ ನಿಜವಾದ ಪುತ್ರಿ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಜಯಲಲಿತಾ ಅವರ ಅಂತ್ಯ ಸಂಸ್ಕಾರ ಅಯ್ಯಂಗಾರ್ ಪದ್ಧತಿಯಂತೆ ನಡೆಯಲಿಲ್ಲ. ಈಗಲಾದರೂ ಸ್ವಂತ ಮಗಳೇ ನಿಂತು ವರ್ಷದ ಶ್ರಾದ್ಧ  ನೆರವೇರಿಸಲಿ ಎಂದು ಜಯಲಲಿತಾ ಸೋದರತ್ತೆ  ಹೇಳಿದ್ದಾರೆ.

ಚೆನ್ನೈ(ಡಿ.4): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿ ನಾಳೆಗೆ ಒಂದು ವರ್ಷ ಪೂರ್ಣವಾಗುತ್ತಿದೆ. ಇದೇ ವೇಳೆ ಜಯಲಲಿತಾ ಸೋದರತ್ತೆ ಸೀಕ್ರೇಟ್ ಒಂದನ್ನು ಬಿಚ್ಚಿಟ್ಟಿದ್ದಾರೆ.

ತಾನು ಜಯಲಲಿತಾ ಹಾಗೂ ಶೋಭನ್ ಬಾಬು ಮಗಳೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅಮೃತಾಳೆ ನಿಜವಾದ ಪುತ್ರಿ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಜಯಲಲಿತಾ ಅವರ ಅಂತ್ಯ ಸಂಸ್ಕಾರ ಅಯ್ಯಂಗಾರ್ ಪದ್ಧತಿಯಂತೆ ನಡೆಯಲಿಲ್ಲ. ಈಗಲಾದರೂ ಸ್ವಂತ ಮಗಳೇ ನಿಂತು ವರ್ಷದ ಶ್ರಾದ್ಧ ನೆರವೇರಿಸಲಿ ಎಂದು ಹೇಳಿದ್ದಾರೆ.

ಅಲ್ಲದೇ ಜಯಲಲಿತಾ ಹಾಗೂ ಶೋಭನ್ ಬಾಬು ಪೋಯೆಸ್ ಗಾರ್ಡನ್ ನಿವಾಸದಲ್ಲಿ ಅನೇಕ ಸಮಯದವರೆಗೂ ಕೂಡ ವಾಸವಿದ್ದರು. ಜಯಾ ನನ್ನ ತಾಯಿ ಎಂದು ಅಮೃತ ಹೇಳುತ್ತಿರುವುದು ಸರಿಯಾಗಿದೆ ಎಂದು ಜಯಲಲಿತಾ ಸೋದರತ್ತೆ ಹೇಳಿದ್ದಾರೆ.

ಅಮೃತ ಎಂಬಾಕೆ ಜಯಲಲಿತಾ ಅವರೇ ನನ್ನ ತಾಯಿ ಎಂದು ಹೇಳಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೂಡ ಈ ಬಗ್ಗೆ ಪತ್ರವನ್ನು ಬರೆಯುವ ಮೂಲಕ ಡಿಎನ್ಎ ಪರೀಕ್ಷೆಗೂ ತಾವು ಸಿದ್ಧವಿದ್ದು, ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ಬೇಕು ಎಂದು ಕೇಳಿಕೊಂಡಿದ್ದರು.