‘ನಿಮ್ಮ ಮಾರ್ಕ್ಸ್ ಶೀಟ್ ನನ್ನ ಬಳಿ ಇದೆ. ಇದನ್ನೆಲ್ಲ ಸೂಕ್ತ ಕಾಲದಲ್ಲಿ ನಿಮ್ಮ ಮುಂದಿಡುತ್ತೇನೆ. ಈಗಲೇ ನೀವು ನಿಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಬೆಂಬಲ ಉಳಿಸಿ ಕೊಳ್ಳುವಲ್ಲಿ ಮತ್ತು ಪಕ್ಷ ಸಂಘಟನೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಶಾಸಕರಿಗೆ ಕೊನೆಯ ಎಚ್ಚರಿಕೆಯ ರೀತಿಯಲ್ಲಿ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು: ‘ನಿಮ್ಮ ಮಾರ್ಕ್ಸ್ ಶೀಟ್ ನನ್ನ ಬಳಿ ಇದೆ. ಇದನ್ನೆಲ್ಲ ಸೂಕ್ತ ಕಾಲದಲ್ಲಿ ನಿಮ್ಮ ಮುಂದಿಡುತ್ತೇನೆ. ಈಗಲೇ ನೀವು ನಿಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಬೆಂಬಲ ಉಳಿಸಿ ಕೊಳ್ಳುವಲ್ಲಿ ಮತ್ತು ಪಕ್ಷ ಸಂಘಟನೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಶಾಸಕರಿಗೆ ಕೊನೆಯ ಎಚ್ಚರಿಕೆಯ ರೀತಿಯಲ್ಲಿ ತೀಕ್ಷ್ಣವಾಗಿ ಹೇಳಿದ್ದಾರೆ.
ಅಮಿತ್ ಶಾ ಅವರ ಈ ಮಾತನ್ನು ಕೇಳಿದ ನಂತರ ಮುಂಬರುವ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುತ್ತದೆಯೊ ಅಥವಾ ತಪ್ಪುತ್ತದೆಯೊ ಎಂಬ ಭೀತಿ ಬಿಜೆಪಿ ಶಾಸಕರಲ್ಲಿ ಶುರುವಾಗಿದೆ. ಭಾನುವಾರ ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ಪಕ್ಷದ ಶಾಸಕರು, ಸಂಸದರು, ವಿವಿಧ ಸುದೀರ್ಘ ಭಾಷಣ ಮಾಡಿದ ಅವರು ಶಾಸಕರ ಬಗ್ಗೆಯೂ ಕೆಲಕಾಲ ಮಾತನಾಡಿ ಎಚ್ಚರಿಕೆಯ ಮಾತುಗಳನ್ನು ಆಡಿದರು ಎಂದು ತಿಳಿದು ಬಂದಿದೆ.
ಸುಮಾರು ಒಂದೂವರೆ ಗಂಟೆ ಕಾಲ ಮಾತನಾಡಿರುವ ಅಮಿತ್ ಶಾ ಅವರು ಚುನಾವಣಾ ತಂತ್ರವನ್ನು ನಾವು ರೂಪಿಸುತ್ತೇವೆ. ನೀವು ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳುವ ಮೂಲಕ ಪಕ್ಷದ ರಾಜ್ಯ ಘಟಕದ ನಿಯಂತ್ರಣವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಘಟಕ ತೆಗೆದುಕೊಳ್ಳಲಿದೆ ಎಂಬುದನ್ನು ಸೂಕ್ಷ್ಮವಾಗಿ ಹೊರಹಾಕಿದರು. ಚುನಾವಣೆ ಎದುರಾಗುತ್ತಿದೆ.
ನಿಮ್ಮ ಪೈಕಿ ಕೆಲವರು ಸುಮ್ಮನೆ ಕುಳಿತಿರಬಹುದು. ಆದರೆ, ನಾವು ಸುಮ್ಮನೆ ಕುಳಿತಿಲ್ಲ. ನಮ್ಮ ತಂಡ ರಾಜ್ಯದಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸುತ್ತಿದೆ. ಪ್ರತ್ಯೇಕವಾಗಿ ಸಮೀಕ್ಷೆಯನ್ನೂ ನಡೆಸುತ್ತಿದ್ದೇವೆ. ನಮ್ಮ ಬಳಿ ಎಲ್ಲ ಕ್ಷೇತ್ರಗಳ ಮಾಹಿತಿಯೂ ಇದೆ. ಹಾಲಿ ಶಾಸಕರು ಏನೇನು ಮಾಡಿದ್ದೀರಿ? ಈ ಅವಧಿ ಯಲ್ಲಿ ನೀವು ಎಷ್ಟು ಅಂಕಗಳನ್ನು ಗಳಿಸಿದ್ದೀರಿ ಎಂಬುದರ ಅಂಕಪಟ್ಟಿ ಯೇ ಇದೆ ಎಂದರು.
