ರಾಜ್ಯದ ವೈಫಲ್ಯ ಒಪ್ಪಿಕೊಂಡರೆ ಕೇಂದ್ರ ಮಧ್ಯಪ್ರವೇಶ : ಮೊದಲ ಬಾರಿ ಮಹದಾಯಿ ವಿವಾದ ಪ್ರಸ್ತಾಪಿಸಿದ ಶಾ

Amith Shah Talk About Mahadayi Issue
Highlights

ಮಹದಾಯಿ ನದಿ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಲು ನಮ್ಮಿಂದ ಆಗುವುದಿಲ್ಲ, ನಾವು ವಿಫಲರಾಗಿದ್ದೇವೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಹೇಳಲಿ, ನಂತರವಷ್ಟೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈ ಜಟಿಲ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ಉಡುಪಿ : ‘ಮಹದಾಯಿ ನದಿ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಲು ನಮ್ಮಿಂದ ಆಗುವುದಿಲ್ಲ, ನಾವು ವಿಫಲರಾಗಿದ್ದೇವೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಹೇಳಲಿ, ನಂತರವಷ್ಟೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈ ಜಟಿಲ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ಬುಧವಾರ ಉಡುಪಿಯಲ್ಲಿ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣಿಗರ ಸಮಾವೇಶ-ಸಂವಾದದಲ್ಲಿ, ‘ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಸುಮ್ಮನಿದೆ’ ಎಂಬ ಯುವ ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಅಮಿತ್‌ ಶಾ ಈ ಉತ್ತರ ನೀಡಿದರು.

ಬೇರೆ ಅರ್ಥ ಬರುತ್ತದೆ: ‘ಇದು ರಾಜ್ಯ ಸರ್ಕಾರಗಳ ನಡುವಿನ ವಿಷಯ, ಅವರೇ ಬಗೆಹರಿಸಿಕೊಳ್ಳಬೇಕು. ಅವರು ವಿಫಲವಾದಾಗ ಕೇಂದ್ರದ ಸಹಾಯವನ್ನು ಕೇಳಬಹುದು, ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡರೆ ಕೇಂದ್ರ ಸರ್ಕಾರ ಈ ಬಗ್ಗೆ ಯೋಚಿಸಬಹುದು, ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರ ಇರುವುದರಿಂದ ಕೇಂದ್ರ ತಾನಾಗಿಯೇ ಆಸಕ್ತಿ ವಹಿಸಿದರೆ ಬೇರೆ ಅರ್ಥ ಬರುತ್ತದೆ’ ಎಂದು ಶಾ ಸ್ಪಷ್ಟನೆ ನೀಡಿದರು.

loader