ರಾಜ್ಯಸಭೆ ಚುನಾವಣೆಗೆ ಗುಜರಾತ್‌'ನಿಂದ ನಾಮಪತ್ರ ಸಲ್ಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಸ್ತಿ ಕಳೆದ 5 ವರ್ಷಗಳಲ್ಲಿ ಶೇ. 300ರಷ್ಟು ಏರಿಕೆಯಾಗಿದೆ. 2012ರಲ್ಲಿ ವಿಧಾನಸಭೆ ಚುನಾವಣೆ ವೇಳೆ ಅಮಿತ್ ಶಾ ಒಟ್ಟು 8.54 ಕೋಟಿ ರು. ಆಸ್ತಿ ಹೊಂದಿದ್ದರು. ಈಗ ಅವರ ಆಸ್ತಿಯ ಮೌಲ್ಯ 34.31 ಕೋಟಿ ರು.ಗೆ ಏರಿಕೆಯಾಗಿದೆ.
ಅಹಮದಾಬಾದ್(ಜು.30): ರಾಜ್ಯಸಭೆ ಚುನಾವಣೆಗೆ ಗುಜರಾತ್'ನಿಂದ ನಾಮಪತ್ರ ಸಲ್ಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಸ್ತಿ ಕಳೆದ 5 ವರ್ಷಗಳಲ್ಲಿ ಶೇ. 300ರಷ್ಟು ಏರಿಕೆಯಾಗಿದೆ. 2012ರಲ್ಲಿ ವಿಧಾನಸಭೆ ಚುನಾವಣೆ ವೇಳೆ ಅಮಿತ್ ಶಾ ಒಟ್ಟು 8.54 ಕೋಟಿ ರು. ಆಸ್ತಿ ಹೊಂದಿದ್ದರು. ಈಗ ಅವರ ಆಸ್ತಿಯ ಮೌಲ್ಯ 34.31 ಕೋಟಿ ರು.ಗೆ ಏರಿಕೆಯಾಗಿದೆ.
ಅಮಿತ್ ಶಾ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ, 2012ರಲ್ಲಿ ಅಮಿತ್ ಶಾ 1.91 ಕೋಟಿ ರು. ಚರಾಸ್ತಿ ಮತ್ತು 6.63 ಕೋಟಿ ರು. ಸ್ಥಿರಾಸ್ತಿ ಮತ್ತು 2.60 ಕೋಟಿ ರು.ಸಾಲವನ್ನು ಹೊಂದಿದ್ದರು. ಆದರೆ, 2017 ರಲ್ಲಿ ಶಾ ಅವರ ಚರಾಸ್ತಿ 19.1 ಕೋಟಿ ರು., ಸ್ಥಿರಾಸ್ತಿ 15.30 ಕೋಟಿ ರು.ಗೆ ಏರಿಕಾಗಿದೆ. ಅಮಿತ್ ಶಾ 47.69 ಲಕ್ಷ ರು. ಸಾಲ ಹೊಂದಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವೆ ಸ್ಮತಿ ಇರಾನಿ ಆಸ್ತಿಯೂ ದುಪ್ಪಟ್ಟಾಗಿದೆ. 2014ರಲ್ಲಿ ಸ್ಮತಿ 4.91 ಕೋಟಿ ರು. ಆಸ್ತಿ ಹೊಂದಿದ್ದರು. ಪ್ರಸ್ತುತ ಅವರ ಆಸ್ತಿ ಮೌಲ್ಯ 8.8 ಕೋಟಿ ರು.ಗಳಿಗೆ ಏರಿದೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಆಸ್ತಿ 2011ರಲ್ಲಿ 3.50 ಕೋಟಿ ರು.ನಿಂದ 2017ರಲ್ಲಿ 8.14 ಕೋಟಿ ರು.ಗೆ ಏರಿದೆ. ಬಿಜೆಪಿ ಇನ್ನೊಬ್ಬ ಅಭ್ಯರ್ಥಿ ಬಲವಂತ್ ಸಿನ್ಹ ರಜ ಪೂತ್ ಆಸ್ತಿ 263 ಕೋಟಿ ಯಿಂದ 316 ಕೋಟಿ ರು.ಗೆ ಏರಿಕೆಯಾಗಿದೆ.
ಸ್ಮತಿ ಪದವಿ ಪಡೆದಿಲ್ಲ:
ನಕಲಿ ಪದವಿ ಪ್ರಮಾಣಪತ್ರ ವಿವಾದಕ್ಕೆ ಸಿಲುಕಿದ್ದ ಸಚಿವೆ ಸ್ಮತಿ ಇರಾನಿ ಅವರು ರಾಜ್ಯಸಭೆೆ ಚುನಾವಣೆಗೆ ಸಲ್ಲಿಸಿರುವ ಪ್ರಮಾನಪತ್ರದಲ್ಲಿ ತಾವು ವಾಣಿಜ್ಯ ಪದವಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2014೪ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಪ್ರಮಾಣ ಪತ್ರದ ವೇಳೆ ತಾವು ಡಿಗ್ರಿ ಪದವಿ ಪಡೆದಿದ್ದಾಗಿ ಸ್ಮತಿ ಹೇಳಿಕೊಂಡಿದ್ದರು.
