ಯದುವೀರ್ ಸೆಳೆಯಲು ಚಾಣಾಕ್ಯನ ರಣತಂತ್ರ

First Published 23, Mar 2018, 6:57 PM IST
Amith Shah Meet Yaduveer
Highlights

ಮಾರ್ಚ್‌ 30,31 ರಂದು ಮೈಸೂರು, ಚಾಮರಾಜನಗರ,ಮಂಡ್ಯ ಭಾಗದಲ್ಲಿ ಪ್ರವಾಸ ಮಾಡಲಿರುವ ಅಮಿತ್ ಷಾ ಮೈಸೂರಿನ ರಾಜ ವಂಶಸ್ಥ ಯದುವೀರ್ ಅವರನ್ನು ಪಕ್ಷಕ್ಕೆ ಸೆಳೆಯಲು ಯೋಜನೆ ರೂಪಿಸಿದ್ದಾರೆ.

ಮೈಸೂರು(ಮಾ.23): ರಾಜ್ಯ ಚುನಾವಣಾ ಕಣ ರಂಗೇರುತ್ತಿದ್ದು ವಿವಿಧ ಪ್ರಮುಖ ಮುಖಂಡರನ್ನು ಸೆಳೆಯಲು ರಾಷ್ಟ್ರೀಯ ನಾಯಕರು ಪಣತೊಡುತ್ತಿದ್ದಾರೆ.  

ಸಾಂಸ್ಕೃತಿಕ ನಗರ ಮೈಸೂರಿಗೆ ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡಿದ್ದು ಕಾಂಗ್ರೆಸ್ ಶಕ್ತಿ ಪ್ರದರ್ಶನ ಬಳಿಕ ಬಿಜೆಪಿ ಚಾಣಕ್ಯ ರಣತಂತ್ರ ರೂಪಿಸಲಿದ್ದಾರೆ. ಮಾರ್ಚ್‌ 30,31 ರಂದು ಮೈಸೂರು, ಚಾಮರಾಜನಗರ,ಮಂಡ್ಯ ಭಾಗದಲ್ಲಿ ಪ್ರವಾಸ ಮಾಡಲಿರುವ ಅಮಿತ್ ಷಾ ಮೈಸೂರಿನ ರಾಜ ವಂಶಸ್ಥ ಯದುವೀರ್ ಅವರನ್ನು ಪಕ್ಷಕ್ಕೆ ಸೆಳೆಯಲು ಯೋಜನೆ ರೂಪಿಸಿದ್ದಾರೆ.

ಈಗಾಗಲೇ ರಾಜವಂಶ್ಥರ ಭೇಟಿಗೆ ಸಮಯ ನಿಗದಿಪಡಿಸಿದ್ದು ಅರಸರ ಬಳಿಕ ನಾನೇ ಅಭಿವೃದ್ಧಿ ಹರಿಕಾರ ಎಂದು ಹೇಳಿದ್ದ ಸಿಎಂ'ಗೆ ಟಾಂಗ್ ನೀಡಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ಬಲವರ್ದನೆ'ಗೆ ಅಮಿತ್ ಷಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮೈಸೂರು ಭಾಗದ ಅದ್ಯಾತ್ಮಿಕ ಶಕ್ತಿ ಕೇಂದ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಅರ್ಶಿವಾದ ಪಡೆಯಲಿದ್ದಾರೆ.

loader