ಮುಂಬೈ (ಸೆ. 21): 2600 ಮರಗಳ ನಾಶಕ್ಕೆ ಕಾರಣವಾಗುವ ಆರೇ ಕಾಲೊನಿಯ ಮೆಟ್ರೋ ಡಿಪೋ ನಿರ್ಮಾಣ ವಿರೋಧಿಸಿ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮೆಟ್ರೋ ಯೋಜನೆಯನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಕ್ಕಾಗಿ ಜುಹೂನಲ್ಲಿರುವ ಬಾಲಿವುಡ್‌ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ನಿವಾಸದ ಮುಂದೆ ನೂರಾರು ಪರಿಸರವಾದಿಗಳು ಬುಧವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.

‘ವಿಕ್ರಮ್‌’ ಜತೆ ಸಂಪರ್ಕ ಸಾಧಿಸಲು ಇಸ್ರೋಗೆ ಇಂದು ಕಡೆಯ ಚಾನ್ಸ್‌!

ಮಂಗಳವಾರ ಟ್ವೀಟ್‌ ಮಾಡಿದ್ದ ಅಮಿತಾಭ್‌ ‘ನನ್ನ ಸ್ನೇಹಿತರೊಬ್ಬರು ತುರ್ತು ಚಿಕಿತ್ಸೆಗಾಗಿ ಕಾರಿನ ಬದಲು ಮೆಟ್ರೋದಲ್ಲಿ ಆಸ್ಪತ್ರೆಗೆ ತೆರಳಿದ್ದರು. ಮೆಟ್ರೋ ಪ್ರಯಾಣದಿಂದ ಸಂತಗೊಂಡ ಅವರು ಮೆಟ್ರೋ ತುಂಬಾ ವೇಗ, ಅನುಕೂಲ ಹಾಗೂ ಪರಿಣಾಮಕಾರಿ ಮಾತ್ರವಲ್ಲ ಮಾಲಿನ್ಯಕ್ಕೂ ಪರಿಹಾರ ಎಂದರು.

ರಿಸರ್ವ್ ಬ್ಯಾಂಕ್‌ನ ಉಪಗವರ್ನರ್‌ ಹುದ್ದೆಗೆ 100 ಮಂದಿ ಅರ್ಜಿ ಸಲ್ಲಿಕೆ

ನಾನು ಮನೆಯಲ್ಲಿ ಬೆಳೆಸಿದಂತೆ ನೀವು ಹೆಚ್ಚೆಚ್ಚು ಮರಗಳನ್ನು ಬೆಳೆಸಿ’ ಎಂದು ಬರೆದುಕೊಂಡಿದ್ದರು. ಅಮಿತಾಭ್‌ ಈ ಹೇಳಿಕೆಗೆ ಆಕ್ರೋಶಗೊಂಡ ಪರಿಸರವಾದಿಗಳು ಅಮಿತಾಭ್‌ ಮನೆ ಮುಂದೆ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ಮಾಡಿದ್ದಾರೆ.

ಅಲ್ಲದೇ ಅಮಿತಾಭ್‌ ಈ ಟ್ವೀಟ್‌ಗೆ ಪ್ರತಿಕ್ರೀಯಿಸಿರುವ ಪರಿಸರವಾದ ಝೋರು ಬತೇನಾ, ನಿಮ್ಮ ಮನೆಯ ಕೈ ತೋಟದ ರಕ್ಷಣೆ ಬಿಟ್ಟು , ಹೊರಗಡೆ ನಿಮಗಾಗಿ ಕಾಯುತ್ತಿರುವ ನಮ್ಮ ಸ್ನೇಹಿತರೊಂದಿಗೆ ಕೈ ಜೋಡಿಸಿ. ನಿಮ್ಮನ್ನು ನಾವು ಏರಿ ಕಾಲೊನಿಗೆ ಕರೆದುಕೊಂಡು ಹೋಗುತ್ತೇವೆ. ಆಗ ನೀವು ನಿಮ್ಮ ನಿರ್ಧಾರ ಬದಲಾಗಬಹುದು. ಯಾವಾಗ ನಮಗೆ ಬೆಂಬಲ ಕೊಡುತ್ತೀರಿ? ಏರಿ ನಿಮಾಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಅಮಿತಾಭ್‌ ಟ್ವೀಟ್‌ಗೆ ಬೆಂಬಲ ವ್ಯಕ್ತ ಪಡಿಸಿದ ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಅಶ್ವಿನಿ ಭಿಡೆಗೂ ತಪಾರಕಿ ಹಾಕಿದ್ದಾರೆ. ಸುಮಾರು 2600 ಮರಗಳ ಮಾರಣ ಹೋಮಕ್ಕೆ ಕಾರಣವಾಗುವ ಏರಿ ಕಾಲೊನಿ ಮೆಟ್ರೋ ಡಿಪೋ ನಿರ್ಮಾಣಕ್ಕೆ ಮುಂಬೈನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ.