ರೈತರ ಆತ್ಮಹತ್ಯೆಯ ಬಗ್ಗೆ ಓದಿದಾಗೆಲ್ಲ ನಾನು ಕಳವಳಕ್ಕೊಳಗಾಗುತ್ತೇನೆ. ಹಿಂದೆ, ವಿಶಾಖಪಟ್ಟಣದಲ್ಲಿ ಚಿತ್ರೀಕರಣದಲ್ಲಿದ್ದಾಗ ರೈತರು ಅತ್ಯಲ್ಪ ಮೊತ್ತದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದುದನ್ನು ಓದಿದ್ದೆ. ಚಿತ್ರೀಕರಣ ಮುಗಿದ ಬಳಿಕ 40-50 ಕುಟುಂಬಗಳಿಗೆ ದೇಣಿಗೆ ನೀಡಿದ್ದೆ. ಈಗ 200 ರೈತ ಕುಟುಂಬಗಳಿಗೆ ಅವರ ಸಾಲದ ಮೊತ್ತ 1.25 ಕೋಟಿ ರು. ಪಾವತಿಸಲಿದ್ದೇನೆ’ ಎಂದು ಬಚ್ಚನ್ ಹೇಳಿದ್ದಾರೆ.
ಮುಂಬೈ (ಆ. 29): ಹುತಾತ್ಮ ಯೋಧರ ಕುಟುಂಬ ಮತ್ತು ರೈತರ ಸಾಲ ಮನ್ನಾಕ್ಕೆ ಈ ವರ್ಷ 2.5 ಕೋಟಿ ದೇಣಿಗೆ ನೀಡುವುದಾಗಿ ಖ್ಯಾತ ನಟ ಅಮಿತಾಭ್ ಬಚ್ಚನ್ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
‘ಕೌನ್ ಬನೇಗಾ ಕರೋಡ್‌ಪತಿ-ಸೀಸನ್ 10’ಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು ಈ ವಿಷಯ ಪ್ರಕಟಿಸಿದ್ದಾರೆ. ಅದರಲ್ಲಿ 1 ಕೋಟಿ ರು. ಹುತಾತ್ಮರ ಕುಟುಂಬಗಳಿಗೆ ಮತ್ತು 1.5 ಕೋಟಿ ರು. ರೈತರ ಸಾಲಮನ್ನಾಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದರು.
‘44 ಹುತಾತ್ಮರ ಕುಟುಂಬಗಳ ಭದ್ರತೆಗಾಗಿ ನಾವು 1 ಕೋಟಿ ರು. ಮೌಲ್ಯದ 112 ಡಿಮಾಂಡ್ ಡ್ರಾಫ್ಟ್‌ಗಳನ್ನು ಸಿದ್ಧಪಡಿಸಿದ್ದೇವೆ. ಸರ್ಕಾರದ ವ್ಯವಸ್ಥೆಯ ಪ್ರಕಾರವೇ ದೇಣಿಗೆ ನೀಡಲಿರುವ ಮೊತ್ತದಲ್ಲಿ ಶೇ.60 ಪತ್ನಿಗೆ, ಶೇ.20 ತಂದೆಗೆ ಮತ್ತು ಶೇ.20 ತಾಯಿಗೆ ಹಣ ವರ್ಗಾಯಿಸಲಿದ್ದೇವೆ’ ಎಂದು ಅವರು ತಿಳಿಸಿದರು.
‘ರೈತರ ಆತ್ಮಹತ್ಯೆಯ ಬಗ್ಗೆ ಓದಿದಾಗೆಲ್ಲ ನಾನು ಕಳವಳಕ್ಕೊಳಗಾಗುತ್ತೇನೆ. ಹಿಂದೆ, ವಿಶಾಖಪಟ್ಟಣದಲ್ಲಿ ಚಿತ್ರೀಕರಣದಲ್ಲಿದ್ದಾಗ ರೈತರು ಅತ್ಯಲ್ಪ ಮೊತ್ತದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದುದನ್ನು ಓದಿದ್ದೆ. ಚಿತ್ರೀಕರಣ ಮುಗಿದ ಬಳಿಕ 40-50 ಕುಟುಂಬಗಳಿಗೆ ದೇಣಿಗೆ ನೀಡಿದ್ದೆ. ಈಗ 200 ರೈತ ಕುಟುಂಬಗಳಿಗೆ ಅವರ ಸಾಲದ ಮೊತ್ತ 1.25 ಕೋಟಿ ರು. ಪಾವತಿಸಲಿದ್ದೇನೆ’ ಎಂದು ಬಚ್ಚನ್ ಹೇಳಿದರು.
