ತಿರುವನಂತಪುರಂ(ಸೆ.15): ಓಣಂ ಆಚರಣೆಯ ವೇಳೆ ಮಲಯಾಳಿ ಜನರನ್ನು ಅವಮಾನಗೊಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕ್ಷಮೆ ಕೋರಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.

ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಓಣಂ ಹಬ್ಬದ ಪ್ರಯುಕ್ತ ಜನರಿಗೆ ಶುಭ ಕೋರಿರುವ ಅಮಿತ್ ಶಾ, " ಹ್ಯಾಪಿ ವಾಮನ ಜಯಂತಿ" ಎಂದು ಪೋಸ್ಟ್ ಹಾಕಿದ್ದರು. ಷಾ ಅವರ ಈ ಪೋಸ್ಟ್ ಟ್ವೀಟರ್'ನಲ್ಲಿ ವೈರಲಾಗಿ ಹರಡಿದ್ದು, ಮಲಯಾಳಿಗರನ್ನು ಕೆರಳಿಸಿದೆ. ಶಾ ಹಾಕಿರುವ ಪೋಸ್ಟ್ ನಲ್ಲಿ ವಿಷ್ಣು ತನ್ನ 5ನೇ ಅವತಾರವಾದ ವಾಮನನ ರೂಪದಲ್ಲಿದ್ದು, ಕೇರಳ ಪ್ರಾಂತ್ಯದ ಮಲಯಾಳಿ ದೊರೆ ಮಹಾಬಲಿ ತಲೆಯ ಮೇಲೆ ಕಾಲಿಟ್ಟಿರುವುದು ಮಲಯಾಳಿಗರು ಕೆರಳುವಂತೆ ಮಾಡಿದೆ.

ಈ ಹಿನ್ನಲೆಯಲ್ಲಿ ಅವರು ಕೂಡಲೆ ಜನರ ಕ್ಷಮೆ ಕೇಳಬೇಕೆಂದು ಪಿಣರಾಯಿ ಒತ್ತಾಯಿಸಿದ್ದಾರೆ.