ನಾಳೆ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಲಿದ್ದಾರೆ. ನಾಳೆ ಸಂಜೆ 4.45 ಕ್ಕೆ ಬೆಂಗಳೂರಿಗೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್  ಶಾ ಆಗಮಿಸಲಿದ್ದು, ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್'ನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.

ಬೆಂಗಳೂರು (ಜ.08): ನಾಳೆ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಲಿದ್ದಾರೆ. ನಾಳೆ ಸಂಜೆ 4.45 ಕ್ಕೆ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಲಿದ್ದು, ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್'ನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.

Add Asianetnews Kannada as a Preferred SourcegooglePreferred

ಸಂಜೆ 5.30 ರಿಂದ ಬಿಜೆಪಿ ನಾಯಕರ ಸಭೆಯಲ್ಲಿ ಭಾಗಿಯಾಗಲಿದ್ದು ತಡರಾತ್ರಿ 10.30 ರವರೆಗೆ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ನಾಳೆ ರಾತ್ರಿ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ 10 ರಂದು ಚಿತ್ರದುರ್ಗಕ್ಕೆ ತೆರಳಲಿದ್ದಾರೆ. ಹೊಳಲ್ಕೆರೆಯ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಸಮಾವೇಶದ ಬಳಿಕ ಹೊಳಲ್ಕೆರೆ ಅತಿಥಿಗೃಹದಲ್ಲಿ ಅರ್ಧ ಗಂಟೆ ಕಾಲ ವಿಶ್ರಾಂತಿ ಪಡೆದು ಮದ್ಯಾಹ್ನ 2.30 ಕ್ಕೆ ಹೊಳಲ್ಕೆರೆಯಿಂದ ಹೆಲಿಕಾಫ್ಟರ್ ಮೂಲಕ ಕೆಂಪೇಗೌಡ ಏರ್ ಪೋರ್ಟ್'ಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 5.30 ಕ್ಕೆ ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.