ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ‘ಕ್ಲಾಸ್’ ಮುಂದುವರೆದಿದ್ದು, ರಾಜ್ಯ ಬಿಜೆಪಿ ಕಾನೂನು ವಿಭಾಗಕ್ಕೂ ಬಿಸಿ ಮುಟ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಕಾನೂನು ವಿಭಾಗದ ಸಂಯೋಜಕ ರಾಜಣ್ಣಗೆ ಅಮಿತ್​ ಶಾ ಕ್ಲಾಸ್ ತೆಗೆದುಕೊಂಡಿದ್ದು, ಬಿಜೆಪಿ ಕಾನೂನು ವಿಭಾಗದ ಕಾರ್ಯವೈಖರಿಗೆ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ‘ಕ್ಲಾಸ್’ ಮುಂದುವರೆದಿದ್ದು, ರಾಜ್ಯ ಬಿಜೆಪಿ ಕಾನೂನು ವಿಭಾಗಕ್ಕೂ ಬಿಸಿ ಮುಟ್ಟಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾನೂನು ವಿಭಾಗದ ಸಂಯೋಜಕ ರಾಜಣ್ಣಗೆ ಅಮಿತ್​ ಶಾ ಕ್ಲಾಸ್ ತೆಗೆದುಕೊಂಡಿದ್ದು, ಬಿಜೆಪಿ ಕಾನೂನು ವಿಭಾಗದ ಕಾರ್ಯವೈಖರಿಗೆ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಿದ್ದರೂ ಯಾಕೆ ಸುಮ್ಮನಿದ್ದೀರಿ? ಈವರೆಗೂ ಎಷ್ಟು ಪಿಐಎಲ್ ಹಾಕಿದ್ದೀರಿ ಎಂದು ಅಮಿತ್ ಶಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.

ಪ್ರಕರಣಗಳ ಕುರಿತು ಕಾನೂನು ವಿಭಾಗ ಏನು ಕ್ರಮ ಕೈಗೊಂಡಿದೆ? ಪಿಐಎಲ್ ಹಾಕಲು ಬರುವುದಿಲ್ಲ ಅಂದ್ರೆ ಹೇಗೆ ಹಾಕೋದು ಅಂತ ಹೇಳುತ್ತೇನೆ, ಎಂದಿದ್ದಾರೆ.