'ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಿರಂತರ ಯೋಗಾಭ್ಯಾಸದಿಂದ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ
ನವದೆಹಲಿ(ಜೂ.20): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 20 ಕೆಜಿ ತೂಕ ಇಳಿಸಿಕೊಂಡು ಫುಲ್ ಸ್ಲಿಮ್ ಆಗಿದ್ದಾರೆ. ಇವರ ಈ ತೂಕ ಕಡಿಮೆಗೆ ಕಾರಣರಾದವರು ಮತ್ಯಾರು ಅಲ್ಲ ಪ್ರಸಿದ್ಧ ಯೋಗ ಗುರು ಬಾಬಾ ರಾಮ್'ದೇವ್.
ಅಂತರರಾಷ್ಟ್ರೀಯ ಯೋಗ ದಿನದ ಮುನ್ನ ದಿನದ ಅಂಗವಾಗಿ ಅಹಮದಬಾದ್ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ ಬಾಬಾ ರಾಮ್'ದೇವ್ 'ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಿರಂತರ ಯೋಗಾಭ್ಯಾಸದಿಂದ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕೆಲವರು ಯೋಗಾಭ್ಯಾಸವನ್ನು ಕ್ರೀಡೆಯ ಭಾಗವಲ್ಲವೆಂದು ಅಲಕ್ಷ ಮಾಡುತ್ತಾರೆ. ಆದರೆ ಯೋಗವು ಪ್ರಸಿದ್ಧ ಕ್ರೀಡೆ ಅಲ್ಲದೆ ಇದನ್ನು ಕ್ರೀಡಾ ವಿಭಾಗದಲ್ಲಿ ಸೇರಿಸುವ ಅಗತ್ಯವಿದೆ' ಎಂದು ತಿಳಿಸಿದರು.
ಯೋಗವನ್ನು ಒಲಿಂಪಿಕ್ಸ್'ನ ಕ್ರೀಡಾ ವಿಭಾಗದಲ್ಲಿ ಸೇರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ' ಎಂದು ಈ ಸಂದರ್ಭದಲ್ಲಿ ಹೇಳಿದರು.

