ಬೆಂಗಳೂರು (ಮಾ. 21):  ​ ಮಾರ್ಚ್ 26 ರಿಂದ ರಾಜ್ಯದಲ್ಲಿ ಅಮಿತ್​ ಶಾ ಪ್ರವಾಸ  ಶುರುವಾಗಲಿದೆ.  ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಪ್ರಮುಖ ಮಠಗಳಿಗೆ  ಭೇಟಿ ನೀಡಲಿದ್ದಾರೆ. 

ಮಾರ್ಚ್​ 26 ರ ಬೆಳಗ್ಗೆ ತುಮಕೂರಿನ‌‌ ಸಿದ್ಧಗಂಗಾ ಮಠಕ್ಕೆ ಅಮಿತ್ ಶಾ ಭೇಟಿ ನೀಡಿ ಡಾ.‌ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆಯಲಿದ್ದಾರೆ.  ಮಾರ್ಚ್ 27 ರಂದು ದಾವಣಗೆರೆಯಲ್ಲೂ ಮಠಗಳಿಗೆ  ಭೇಟಿ ನೀಡಲಿದ್ದಾರೆ.  ಮಾದಾರ ಚನ್ನಯ್ಯ ಸ್ವಾಮೀಜಿ ‌ಮಠ‌ ಮತ್ತು ಮುರುಘಾ ಮಠಕ್ಕೂ ಭೇಟಿ ನೀಡಲಿದ್ದಾರೆ.  ಎರಡು ದಿನಗಳ ಪ್ರವಾಸದಲ್ಲಿ ವೇಳೆ ನಾಲ್ಕು ‌ಮಠಗಳಿಗೆ ಅಮಿತ್​ ಶಾ ಭೇಟಿ ನೀಡಲಿದ್ದಾರೆ. 
ನಾಲ್ಕು ಜಿಲ್ಲೆಗಳ ಪ್ರವಾಸಕ್ಕಾಗಿ  ಮಾರ್ಚ್ 25ರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಿಜೆಪಿ ಸದಾ ಮಠ ಮಾನ್ಯಗಳ ಜೊತೆ ಇರಲಿದೆ ಎನ್ನುವ ಸಂದೇಶ ಇದಾಗಿದೆ.  ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಠಗಳಿಗೆ ಹೆಚ್ಚಿನ ಅನುದಾನ ನೀಡಿತ್ತು.