ನಿರ್ಮಾಲಾನಂದ ಶ್ರೀ'ಗಳು ಶೂದ್ರ ಸ್ವಾಮೀಜಿ ಆಗಿರುವ ಕಾರಣದಿಂದ ಈ ರೀತಿ ವರ್ತಿಸಿದ್ದಾರೆ, ಬ್ರಾಹ್ಮಣ ಅಥವಾ ಇನ್ನಿತರೆ ಮೇಲ್ಜಾತಿಗೆ ಸೇರಿದ ಸ್ವಾಮೀಜಿಯವರನ್ನು ಭೇಟಿ ಮಾಡಿದಾಗ ಈ ರೀತಿ ವರ್ತಿಸುತ್ತಿದ್ದರೆ' ಎಂದು ನೆಟ್ಟಿಗರು ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಮಂಡ್ಯ(ಆ.14): ಮೂರು ಕರ್ನಾಟಕ ಪ್ರವಾಸಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಭಾನುವಾರ ಕಾರ್ಯಕ್ರಮದ ನಿಮಿತ್ತ ನಾಗಮಂಗಲತಾಲ್ಲೂಕಿನಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಶ್ರೀಗಳ ಜೊತೆ ಮಾತುಕತೆ ನಡೆಸುವಾಗ ಷಾ ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತು ಸ್ವಾಮೀಜಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಫೇಸ್'ಬುಕ್, ವ್ಯಾಟ್ಸ್'ಅಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ಮಾಲಾನಂದ ಶ್ರೀ'ಗಳು ಶೂದ್ರ ಸ್ವಾಮೀಜಿ ಆಗಿರುವ ಕಾರಣದಿಂದ ಈ ರೀತಿ ವರ್ತಿಸಿದ್ದಾರೆ, ಬ್ರಾಹ್ಮಣ ಅಥವಾ ಇನ್ನಿತರೆ ಮೇಲ್ಜಾತಿಗೆ ಸೇರಿದ ಸ್ವಾಮೀಜಿಯವರನ್ನು ಭೇಟಿ ಮಾಡಿದಾಗ ಈ ರೀತಿ ವರ್ತಿಸುತ್ತಿದ್ದರೆ' ಎಂದು ನೆಟ್ಟಿಗರು ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿಯಾಗಿರುವ ರಮ್ಯಾ ಕೂಡ ತಮ್ಮ ಫೇಸ್'ಬುಕ್ ಪುಟದಲ್ಲಿ 'ಬಿಜೆಪಿರಾಷ್ಟ್ರಾಧ್ಯಕ್ಷಅಮಿತ್ಶಾ ಅವರೆ 'ಶ್ರೀಗಳಮುಂದೆಕಾಲಿನಮೇಲೆಕಾಲುಹಾಕಿಕೊಂಡುಕುಳಿತುಕೊಳ್ಳುವುದುನಿಮ್ಮಸಂಸ್ಕೃತಿಯೇ?' ಎಂದು ತಲೆಬರಹವಿರುವ ಭಾವಚಿತ್ರವನ್ನು ಶೇರ್ ಮಾಡಿದ್ದಾರೆ.