ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ರಾಜತಾಂತ್ರಿಕ ಸಲಹೆಗಾರ ಅಹ್ಮದ್ ಪಟೇಲ್'ರನ್ನು ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಪಣ ತೊಟ್ಟು ಹಲವಾರು ಪ್ರಯತ್ನಗಳನ್ನು ಮಾಡಿದರು. ಈ ಸೋಲಿನಿಂದ ಕಾಂಗ್ರೆಸ್'ಗೆ ಮುಖಭಂಗ ಮಾಡಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ನಗೆಪಾಟಲಿಗೀಡು ಮಾಡಬೇಕು ಎಂಬುವುದು ಅವರ ಉದ್ದೇಶವಾಗಿತ್ತು. ಆದರೆ ಕೊನೆಗೂ ಈ ಬಿಜೆಪಿಯ 'ಅಜೇಯ ಚಾಣಕ್ಯ'(ಅಮಿತ್ ಶಾ) ತನ್ನ ಈ ಪ್ರಯತ್ನದಿಂದ ತನ್ನ ವರ್ಚಸ್ಸಿಗೇ ಕೇಡುಂಟು ಮಾಡಿಕೊಂಡಿದ್ದಾರೆ. ಹೀಗಂತ ಕಾಂಗ್ರೆಸ್'ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ನವದೆಹಲಿ(ಆ.10): ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ರಾಜತಾಂತ್ರಿಕ ಸಲಹೆಗಾರ ಅಹ್ಮದ್ ಪಟೇಲ್'ರನ್ನು ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಪಣ ತೊಟ್ಟು ಹಲವಾರು ಪ್ರಯತ್ನಗಳನ್ನು ಮಾಡಿದರು. ಈ ಸೋಲಿನಿಂದ ಕಾಂಗ್ರೆಸ್'ಗೆ ಮುಖಭಂಗ ಮಾಡಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ನಗೆಪಾಟಲಿಗೀಡು ಮಾಡಬೇಕು ಎಂಬುವುದು ಅವರ ಉದ್ದೇಶವಾಗಿತ್ತು. ಆದರೆ ಕೊನೆಗೂ ಈ ಬಿಜೆಪಿಯ 'ಅಜೇಯ ಚಾಣಕ್ಯ'(ಅಮಿತ್ ಶಾ) ತನ್ನ ಈ ಪ್ರಯತ್ನದಿಂದ ತನ್ನ ವರ್ಚಸ್ಸಿಗೇ ಕೇಡುಂಟು ಮಾಡಿಕೊಂಡಿದ್ದಾರೆ. ಹೀಗಂತ ಕಾಂಗ್ರೆಸ್'ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಸುದ್ದಿ ವಾಹಿನಿಯೊಂದರ ಬ್ಲಾಗ್ ಒಂದಕ್ಕೆ ಬರೆದಿರುವ ಮಣಿಶಂಕರ್ ಅಯ್ಯರ್ 'ಸಾಮಾನ್ಯ ರಾಜಸಭಾ ಚುನಾವಣೆಯೊಂದನ್ನು ಯುದ್ಧದಂತ ಪರಿಸ್ಥಿತಿ ನಿರ್ಮಿಸಿದ್ದ ಅಮಿತ್ ಶಾ ಕೊನೆಗೂ ತಮ್ಮ ಮುಖಕ್ಕೆ ತಾವೇ ಮೊಟ್ಟೆ ಹೊಡೆದುಕೊಂಡಿದ್ದಾರೆ, ಇಲ್ಲವೆಂದಾದರೆ ಸಸ್ಯಹಾರಿಯಾಗಿರುವ ಅಮಿತ್ ಶಾ ಸ್ಥಿತಿ ತಮ್ಮದೇ ಗಡ್ಡಕ್ಕೆ ತಾನೇ ಬೆಣ್ಣೆ ಹಚ್ಚಿಕೊಂಡಿದ್ದಾರೆ ಎನ್ನಬಹುದು" ಎಂದಿದ್ದಾರೆ.

ಮುಂದಕ್ಕೆ ಬರೆದಿರುವ ಇವರು "ಚುನಾವಣೆಯಲ್ಲಿ ಕಾಂಗ್ರೆಸ್'ನ್ನು ಸೋಲಿಸಲು ಅತ್ಯಂತ ಕೆಟ್ಟ ಮಾರ್ಗಗಳನ್ನು ಬಳಸಿದ ಬಳಿಕವೂ 'ಕಾಂಗ್ರೆಸ್'ನ ಇಬ್ಬರು ದ್ರೋಹಿಗಳು, ತಮ್ಮ ದ್ರೋಹದ ಸಾಕ್ಷಿ ತೋರಿಸಲು ಶಾ ಎದುರು ತಮ್ಮ ಮತಪತ್ರಗಳನ್ನು ಎತ್ತಿ ತೋರಿಸಿದ ಮರುಕ್ಷಣವೇ ಇಬ್ಬರ ಮತಗಳನ್ನು ಅಸಿಂಧುಗೊಳಿಸಿದ್ದು, ಅಮಿತ್ ಶಾಗೆ ಎದುರಾದ ಅತಿ ದೊಡ್ಡ ವಿಪರ್ಯಾಸವೆನ್ನಬಹುದು. ಯಾಕೆಂದರೆ ಶಾ ಬಳಸಿದ್ದ ಈ ಅಡ್ಡ ದಾರಿಯಿಂದಾಗಿ ತಾನು ಸೋಲಿಸಬೇಕೆಂದಿದ್ದ ವ್ಯಕ್ತಿ, ಪಕ್ಷಕ್ಕೆ ಗೆಲುವು ಸಿಕ್ಕಂತಾಗಿದೆ' ಎಂದು ತಿಳಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಮಣಿಶಂಕರ್ 'ಬಿಜೆಪಿ ರಾಷ್ಟ್ರಾಧ್ಯಕ್ಷನ ಅಸಲಿಯತ್ತು ಎಲ್ಲರೆದುರು ಬಹಿರಂಗಗೊಂಡಿದೆ. ಅವರು ದೈಹಿಕ ಬಲ ಹಾಗೂ ಹಣದ ಬಲ ಉಪಯೋಗಿಸುವ ವ್ಯಕ್ತಿ. ತಮ್ಮ ತಪ್ಪು ಕೆಲಸಗಳಿಂದ ಅಸೈಧ್ಧಾಂತಿಕ, ಅನೈತಿಕ ಮತ್ತು ರಾಜಕೀಯ ಲಕ್ಷ್ಯಗಳನ್ನು ಸಾಧಿಸಲು ಅವರು ಎಷ್ಟೇ ಕೀಳು ಮಟ್ಟಕ್ಕೆ ಇಳಿಯಲು ತಯಾರಿರುವ ರಾಜಕಾರಣಿ ಎಂಬುವುದು ಸ್ಪಷ್ಟವಾಗಿ ಬಹಿರಂಗವಾಗಿದೆ. ಆದರೆ ಈ ಬಾರಿ ಕಾಂಗ್ರೆಸ್'ನ 'ಚಾಣಕ್ಯ'(ಅಹ್ಮದ್ ಪಟೇಲ್), ಬಿಜೆಪಿಯ 'ಅಜೇಯ ಚಾಣಕ್ಯ'ನಿಗೆ ಸೋಲುಣಿಸಿದ್ದಾರೆ. ಅಮಿತ್ ಶಾರ ಉಪಾಯವನ್ನರಿಯುವುದರೊಂದಿಗೆ ಗುಜರಾತ್'ನ ರಾಜನೀತಿಯ ತನಗಿರುವ ಆಳವಾದ ಅನುಭವವನ್ನು ಬಳಸಿಕೊಂಡರು. ಹೀಗಾಗಿ ಅವರು ಅಮಿತ್ ಶಾಗಿಂತ ಒಂದು ಹೆಜ್ಜೆ ಮುಂದಿದ್ದರು' ಎಂದಿದ್ದಾರೆ.