Asianet Suvarna News Asianet Suvarna News

ಕಿವೀಸ್ ‘ಕಿವಿ’ ಕಚ್ಚಿ ಏಕದಿನ ಸರಣಿ ಗೆದ್ದ ಭಾರತ : ಮೋಡಿ ಮಾಡಿದ ಅಮಿತ್ ಮಿಶ್ರಾ

ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಹೇಳಿಕೊಳ್ಳುವ ಆರಂಭವೇನು ಸಿಗಲಿಲ್ಲ. ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ 40 ರನ್​ಗಳ ಜೊತೆಯಾಟವಾಡಿದರು. ಆದರೆ ರಹಾನೆ 20 ರನ್​​ಗೆ ನಿರ್ಗಮಿಸಿದರು. ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಜೊತೆಯಾಗಿ 79 ರನ್​ಗಳ ಜೊತೆಯಾಟವಾಡಿದರು.

Amit Mishras 5 wicket haul helps India win New Zealand ODI series

ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಭಾರತೀಯ ಪಡೆ ನ್ಯೂಜಿಲೆಂಡ್ ತಂಡವನ್ನು 190 ರನ್ನುಗಳಿಂದ ಮಣಿಸಿ  ಭರ್ಜರಿ ಜಯ ಸಾಧಿಸಿ ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಟೆಸ್ಟ್​ ಹಾಗೂ ಒಂದು ದಿನದ ಸರಣಿಯನ್ನು ವಿಜಯಿಸಿದೆ.

ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಹೇಳಿಕೊಳ್ಳುವ ಆರಂಭವೇನು ಸಿಗಲಿಲ್ಲ. ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ 40 ರನ್​ಗಳ ಜೊತೆಯಾಟವಾಡಿದರು. ಆದರೆ ರಹಾನೆ 20 ರನ್​​ಗೆ ನಿರ್ಗಮಿಸಿದರು. ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಜೊತೆಯಾಗಿ 79 ರನ್​ಗಳ ಜೊತೆಯಾಟವಾಡಿದರು.

ರೋಹಿತ್ ಶರ್ಮಾ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 70 ರನ್'ಗಳೊಂದಿಗೆ ಅರ್ಧ ಶತಕ ಸಿಡಿಸಿದರು. ರೋಹಿತ್ ನಿರ್ಗಮಿಸಿದ ನಂತರ ಸ್ಫೋಟಕ ಆಟಗಾರ ವಿರಾಟ್ ಕೋಹ್ಲಿ ಅವರು ನಾಯಕ ಧೋನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿ 1 ಸಿಕ್ಸ್'ರ್ ಹಾಗೂ 2 ಬೌಂಡರಿಗಳೊಂದಿಗೆ 65 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.

ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ 41, ಕೇದಾರ್ ಜಾಧವ್ 39 ಹಾಗೂ ಅಕ್ಷರ್ ಪಟೇಲ್ 24 ರನ್ ಗಳಿಸುವುದರೊಂದಿಗೆ ಭಾರತ 50 ಓವರ್'ಗಳಿಗೆ 6 ವಿಕೇಟ್'ಗಳ ನಷ್ಟಕ್ಕೆ 269 ರನ್ ಗಳಿಸಿತು.

ನ್ಯೂಜಿಲೆಂಡ್ ಪರ ಬೌಲ್ಟ್ ಹಾಗೂ ಸೋಧಿ ತಲಾ 2 ಪಡೆದರೆ ನಿಶಾಮ್ ಮತ್ತು ಸಂತ್ನರ್ ಒಂದೊಂದು ವಿಕೇಟ್ ಕಬಳಿಸಿದರು.

ಮ್ಯಾಜಿಕ್ ಮಾಡಿದ ಅಮಿತ್ ಮಿಶ್ರಾ      

ಭಾರತದ 270 ರನ್'ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಬಂದಿತು.  ಆರಂಭ ಆಟಗಾರರಾದ ಗುಪ್ಟಿಲ್ ಹಾಗೂ ಲಾತಮ್  ಅವರನ್ನು ವೇಗದ ಬೌಲರ್'ಗಳಾದ ಉಮೇಶ್ ಯಾದವ್ ಮತ್ತು ಜಸ್​ಪ್ರೀತ್ ಬುಮ್ರಾ ಔಟ್ ಮಾಡಿದರು.

ನಂತರ ಕೆಲ ಹೊತ್ತು ಆಟ ಆಡಿದ ವಿಲಿಯಮ್ಸ್'ನ್ ಮತ್ತು ರೇಸ್ ಟೇಲರ್ ಅವರನ್ನು ಸ್ಪಿನ್ನರ್'ಗಳಾದ ಅಮಿತ್ ಮಿಶ್ರಾ ಹಾಗೂ ಅಕ್ಷರ್ ಪಟೇಲ್ ಪೆವಿಲಿಯನ್'ಗೆ ಕಳುಹಿಸಿದರು.

ಅನಂತರ ಬಂದ 6 ಬ್ಯಾಟ್ಸ್'ಮೆನ್'ಗಳ್ಯಾರು ಒಂದಂಕಿಯ ಮೊತ್ತವನ್ನು ಗಳಿಸಲಿಲ್ಲ. ಇವರಲ್ಲಿ ನಾಲ್ವರನ್ನು ಅಮಿತ್ ಮಿಶ್ರಾ ಔಟ್ ಮಾಡಿದರು. ಕೊನೆಯದಾಗಿ ನ್ಯೂಜಿಲೆಂಡ್ 23.1 ಓವರ್'ಗಳಲ್ಲಿ  79 ರನ್'ಗಳಿಗೆ ಪತನವಾಯಿತು. ಅದ್ಭುತ ಪ್ರದರ್ಶನ ತೋರಿದ ಸ್ಪಿನ್ನರ್ ಅಮಿತ್ ಮಿಶ್ರಾ 18 ರನ್'ಗಳಿಗೆ 5 ವಿಕೆಟ್ ಕಬಳಿಸಿದರು. ಅಕ್ಷರ್ ಪಟೇಲ್ 2,ಉಮೇಶ್ ಯಾದವ್ ಮತ್ತು ಜಸ್​ಪ್ರೀತ್ ಬುಮ್ರಾ 1 ವಿಕೆಟ್ ಗಳಿಸಿದರು. . ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಜಯಂತ್ ಯಾದವ್ ಕೂಡ ಒಂದು ವಿಕೆಟ್​ ಪಡೆದರು.

ಒಟ್ಟು ಸರಣಿಯಲ್ಲಿ 15 ವಿಕೇಟ್ ಕಬಳಿಸಿದ್ದಕ್ಕಾಗಿ ಅಮಿತ್ ಮಿಶ್ರಾ  ಅವರು ಪಂದ್ಯ ಹಾಗೂ ಸರಣಿ ಪುರುಶೋತ್ತಮ ಪಾತ್ರಕ್ಕೆ ಪಾತ್ರರಾದರು. ಒಂದು ದಿನದ ಸರಣಿ ಗೆಲುವಿನೊಂದಿಗೆ ಭಾರತಕ್ಕೆ ದೀಪಾವಳಿ ಉಡುಗೊರೆ ದೊರಕಿದೆ.

 

ಭಾರತಕ್ಕೆ 190 ರನ್ಗಳ ಜಯದೊಂದಿಗೆ 3-2 ರಿಂದ ಏಕದಿನ ಸರಣಿ

ಭಾರತ 50 ಓವರ್​ನಲ್ಲಿ 269/6

(ರೋಹಿತ್​​-ವಿರಾಟ್ ತಲಾ ಅರ್ಧಶತಕ)

ಕಿವೀಸ್ 23.1 ಓವರ್​ನಲ್ಲಿ 79/10

( ಅಮಿತ್ ಮಿಶ್ರಾಗೆ 5, ಅಕ್ಷರ್​ಗೆ 2 ವಿಕೆಟ್)

 

Follow Us:
Download App:
  • android
  • ios