ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರ್ ಎಸ್ ಎಸ್ ಮತ್ತು ಬಿಜೆಪಿ ಮೇಲೆ ನಿರಂತರ ಆರೋಪ ಮಾಡಿಕೊಂಡು ಬಂದಿದ್ದಾರೆ. ಆದರೆ ಇದೆಲ್ಲದರ ನಡುವೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ತನ್ನ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರನ್ನೇ ಆಹ್ವಾನಿಸಿದೆ! ಆಶ್ಚರ್ಯ ಪರಬೇಡಿ ಹೀಗೊಂದು ಸುದ್ದಿ ಹರಿದಾಡುತ್ತಿದೆ.

ನವದೆಹಲಿ(ಆ.27) ಹಿಂದೊಮ್ಮೆ ಪ್ರಣಬ್ ಮುಖರ್ಜಿ ಅವರನ್ನೇ ಕಾರ್ಯಕ್ರಮವೊಂದಕ್ಕೆ ಆರ್ ಎಸ್ ಎಸ್ ಆಹ್ವಾನಿಸಿ ಅವರಿಂದ ಭಾಷಣ ಮಾಡಿಸಿತ್ತು. ಇದೀಗ ರಾಹುಲ್ ಗಾಂಧಿ ಅವರನ್ನೇ ಆಹ್ವಾನಿಸಲಾಗಿದೆ. ಮೋಹನ್ ಭಾಗವತ ಅಂತಿಮ ತೀರ್ಮಾನ ತಯೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

ಆದರೆ ಈ ಮಾತನ್ನು ತಳ್ಳಿ ಹಾಕಿರುವ ಆರ್ ಎಸ್ ಎಸ್ ಪ್ರಮುಖ ಅರುಣ್ ಕುಮಾರ್ ಸಂಘ ಅಂತಹ ಯಾವುದೇ ಆಹ್ವಾನ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಜರ್ಮನಿಯ ಬರ್ಲಿನ್ ನಲ್ಲಿಮಾತನಾಡುತ್ತ ರಾಹುಲ್ ಗಾಂಧಿ ಆರ್ ಎಸ್ ಎಸ್ ಮತ್ತು ಬಿಜೆಪಿ ದೇಶವನ್ನು ಒಡೆದು ಆಳುತ್ತಿವೆ. ದೇಶದಲ್ಲಿ ರೈತರ ಮತ್ತು ಯುವಕರ ದುಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದ್ದರು.