ಗ್ರಾಮೀಣ ಭಾಗದ ಜನರು ಹಾಗೂ ಬಿಳಿಯ ಜನಾಂಗದವರು ಟ್ರಂಪ್'ಗೆ ಹೆಚ್ಚು ಒಲವು ತೋರಿರುವುದು ಕಂಡುಬಂದಿದೆ. ನ್ಯೂಯಾರ್ಕ್'ನಂತರ ನಗರ ಭಾಗಗಳಲ್ಲಿ ಹಿಲರಿ ಬೆಂಬಲ ಪಡೆದಿದ್ದಾರೆ.
ವಾಷಿಂಗ್ಟನ್(ನ. 09): ಮೊದಲಿಂದಲೂ ಹಲವು ವಿವಾದಗಳಿಗೆ ಈಡಾಗಿದ್ದ, ಸಮೀಕ್ಷೆಗಳಲ್ಲಿ ಸೋಲನುಭವಿಸಬಹುದೆಂದು ಅಂದಾಜಿಸಲ್ಪಟ್ಟಿದ್ದ ಡೊನಾಲ್ಡ್ ಟ್ರಂಪ್ ಈಗ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿನ ಹೊಸ್ತಿಲಲ್ಲಿದ್ದಾರೆ. ಡೆಮಾಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಸಾಕಷ್ಟು ಮತಗಳ ಅಂತರದ ಮುನ್ನಡೆ ಹೊಂದಿದ್ದಾರೆ. ಫ್ಲೋರಿಡಾ ರಾಜ್ಯದ ಮತದಾರರು ಟ್ರಂಪ್'ಗೆ ಒಲವು ತೋರಿದ್ದು ನಿರ್ಣಾಯಕವೆನಿಸಿದೆ. ನಮ್ಮಲ್ಲಿ ಉತ್ತರಪ್ರದೇಶವಿದ್ದಂತೆ ಅಮೆರಿಕಾದಲ್ಲಿ ಫ್ಲೋರಿಡಾ ರಾಜ್ಯವಿದೆ. ಈ ರಾಜ್ಯದಲ್ಲಿ ಸಿಕ್ಕ ಗೆಲುವು ಟ್ರಂಪ್ ಅವರನ್ನು ಸರಿಯಾದ ಹಳಿಗೆ ತಂದು ನಿಲ್ಲಿಸಿತೆನ್ನಲಾಗಿದೆ. ಗ್ರಾಮೀಣ ಭಾಗದ ಜನರು ಹಾಗೂ ಬಿಳಿಯ ಜನಾಂಗದವರು ಟ್ರಂಪ್'ಗೆ ಹೆಚ್ಚು ಒಲವು ತೋರಿರುವುದು ಕಂಡುಬಂದಿದೆ. ನ್ಯೂಯಾರ್ಕ್'ನಂತರ ನಗರ ಭಾಗಗಳಲ್ಲಿ ಹಿಲರಿ ಬೆಂಬಲ ಪಡೆದಿದ್ದಾರೆ.
ಟ್ರಂಪ್ ಗೆದ್ದ ರಾಜ್ಯಗಳು: ಫ್ಲೋರಿಡಾ, ಸೌಥ್ ಡಕೋಟಾ, ವ್ಯೋಮಿಂಗ್, ಟೆಕ್ಸಾಸ್, ಕಾನ್ಸಾಸ್, ನೆಬ್ರಾಸ್ಕಾ, ಅರ್ಕಾನಾಸ್, ಓಕ್ಲಾಹಾಮಾ, ಸೌಥ್ ಕರೋಲಿನಾ ಮತ್ತು ಟೆನ್ನೆಸ್ಸೀ
ಹಿಲರಿ ಗೆದ್ದ ರಾಜ್ಯಗಳು: ಇಲಿನಾಯ್ಸ್, ನ್ಯೂಯಾರ್ಕ್, ಮೇರಿಲ್ಯಾಂಡ್, ನ್ಯೂಜೆರ್ಸಿ, ಮಸಾಚುಸೆಟ್ಸ್, ಡೆಲಾವೇರ್, ಕೊಲಂಬಿಯಾ
