ನವೆಡಾದ ರೆನೊದಲ್ಲಿ ಟ್ರಂಪ್ ಚುನಾವಣಾ ಪ್ರಚಾರ ಮಾಡಲು ಅಣಿಯಾಗುತ್ತಿದ್ದಾಗ ಗುಂಪಿನ ಮಧ್ಯದಿಂದ ಗನ್ ಇದೆ ಎಂಬ ಕೂಗು ಕೇಳಿ ಬಂದಿತ್ತು. 

ನವೆಡಾ(ನ.07): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಹೊಸ ಬೆಳವಣಿಗೆಗಳು ಕಂಡುಬರುತ್ತಿವೆ. 

ನವೆಡಾದ ರೆನೊದಲ್ಲಿ ಟ್ರಂಪ್ ಚುನಾವಣಾ ಪ್ರಚಾರ ಮಾಡಲು ಅಣಿಯಾಗುತ್ತಿದ್ದಾಗ ಗುಂಪಿನ ಮಧ್ಯದಿಂದ ಗನ್ ಇದೆ ಎಂಬ ಕೂಗು ಕೇಳಿ ಬಂದಿತ್ತು. 

ತಕ್ಷಣ ಜಾಗೃತರಾದ ಅಮೆರಿಕದ ಸಿಕ್ರೆಟ್ ಸರ್ವಿಸ್ ಸಿಬ್ಬಂದಿ ವೇದಿಕೆಯಿಂದ ಟ್ರಂಪ್‍ರನ್ನು ಕೆಳಗಿಸಿದ್ರು. ಕೆಲವು ನಿಮಿಷಗಳ ನಂತರ ವೇದಿಕೆಗೆ ಹಿಂದಿರುಗಿದ ಟ್ರಂಪ್ ಇಂಥ ಬೆದರಿಕೆಗಳು ನಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ನಮ್ಮ ಮುನ್ನಡೆಯನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.