ಯೆಮೆನ್’ನಲ್ಲಿ ಇರಾನ್ ಬೆಂಬಲಿತ ಹುತಿ ಬಂಡುಕೋರರ ವಿರುದ್ಧ ಯುದ್ಧ ಸಾರಿರುವ ಸೌದಿ ಅರೇಬಿಯಾದ ರಾಜಪ್ರಭುತ್ವದ ನಿರ್ಧಾರಕ್ಕೆ ಅಮೆರಿಕಾ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡದಿರಲು ನಿರ್ಧರಿಸಿದೆ. 

ರಿಯಾದ್ (ಡಿ.15): ಸೌದಿ ಅರೇಬಿಯಾಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲು ಅಮೆರಿಕ ನಿರ್ಧರಿಸಿದೆ.

ಯೆಮೆನ್’ನಲ್ಲಿ ಇರಾನ್ ಬೆಂಬಲಿತ ಹುತಿ ಬಂಡುಕೋರರ ವಿರುದ್ಧ ಯುದ್ಧ ಸಾರಿರುವ ಸೌದಿ ಅರೇಬಿಯಾದ ರಾಜಪ್ರಭುತ್ವದ ನಿರ್ಧಾರಕ್ಕೆ ಅಮೆರಿಕಾ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡದಿರಲು ನಿರ್ಧರಿಸಿದೆ. 

ಸೌದಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರ ಹುತಿ ಬಂಡುಕೋರರಿಗೆ ಹಿಂಸೆ ನೀಡುತ್ತಿರುವುದರ ಬಗೆಗಿನ ನಮ್ಮ ಕಾಳಜಿಯನ್ನು ತೋರುತ್ತದೆ ಎಂದು ಅಮೆರಿಕ ತಿಳಿಸಿದೆ.

ಸೌದಿ ಅರೇಬಿಯಾ ಹಾಗೂ ಅಮೆರಿಕಾದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು, ಈಗ ಅಮೆರಿಕ ಸೌದಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡದಿರುವ ನಿರ್ಧಾರ ತೆಗೆದುಕೊಂಡಿದೆ.