`ನಿನ್ನ ಸುದ್ದಿಗಳನ್ನ ವರದಿ ಮಾಡುವುದಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿದ್ದೀಯಾ. ಟ್ವಿಟ್ಟರ್ ಮೂಲಕ ೊಬ್ಬೊಬ್ಬರೇ ವರದಿಗಾರರನ್ನ ಬೆದರಿಸುತ್ತಿದ್ದೀಯ, ನಿನ್ನ ಫಾಲೋವರ್ಸ್`ಗೂ ಇದೇ ಮಾಡುವಂತೆ ತಾಕೀತು ಮಾಡಿದ್ದೀಯ. ನಿನ್ನ ಈ ವರ್ತನೆ ನಿನ್ನ ಮಾನಹಾನಿಗೆ ಕಾರಣವಾಗುತ್ತೆ ಎಂದು ಪತ್ರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕಿಡಿ ಕಾರಿದ್ದಾರೆ.

ನ್ಯೂಯಾರ್ಕ್(ಜ.19): ಪತ್ರಕರ್ತರ ವಿರುದ್ಧ ಹರಿಹಾಯುತ್ತಿದ್ದ ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್`ಗೆ ಅಮೆರಿಕ ಮಾಧ್ಯಮಗಳು ಚಾಟಿ ಬೀಸಿದೆ. ನಿಯಮ ರೂಪಿಸುವುದು ನಾವು, ನೀನಲ್ಲ. ಜನರಿಗೆ ಯಾವ ರೀತಿ ಅತ್ಯುತ್ತಮ ಸೇವೆ ಮಾಡಬೇಕೆಂಬುದನ್ನ ಯೋಚಿಸಿ ಎಂದು ಕಿವಿಮಾತು ಹೇಳಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಲಂಬಿಯಾ ಜರ್ನಲಿಸಂ ರಿವೀಮ್ ಮ್ಯಾಗಜಿನ್`ನಲ್ಲಿ ಪತ್ರಕರ್ತರ ಬಹಿರಂಗ ಪತ್ರ ಪ್ರಕಟವಾಗಿದ್ದು, ನೇರಾನೇರ ಅಧ್ಯಕ್ಷರ ವಿರುದ್ಧ ಪತ್ರಕರ್ತರು ನೇರಾನೇರ ಕಿಡಿಕಾರಿದ್ದಾರೆ.