ಬಹುದಿನಗಳ ನಂತರ ವಿಧಾನಸೌಧಕ್ಕೆ ಬಂದ ಮಾಜಿ ಸಚಿವ ಅಂಬರೀಶ್ 'ಎಲ್ಲರೂ ಸ್ವಾರ್ಥ ಬಿಟ್ಟರೆ ಮಹದಾಯಿ ವಿವಾದ ಒಂದು ನಿಮಿಷದಲ್ಲಿ ಪರಿಹಾರ'

ಬೆಂಗಳೂರು: ಬಹುದಿನಗಳ ನಂತರ ವಿಧಾನಸೌಧಕ್ಕೆ ಬಂದ ಮಾಜಿ ಸಚಿವ ಅಂಬರೀಶ್, ಕನಾ೯ಟಕದವರು ಭಾರತೀಯರಲ್ವಾ? ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಭೇಟಿ ನೀಡಿದ್ದ ಮೋದಿ, ನಾನಿದ್ದೇನೆ ಎಂದು ಭರವಸೆ ನೀಡಿದ್ದರು; ಆದ್ರೆ ಕರ್ನಾಟಕಕ್ಕೆ ಮೋದಿ ಅಂಥ ಭರವಸೆ ಕೊಟ್ಟಿಲ್ಲ ಎಂದು ಅಂಬರೀಶ್ ಕಿಡಿಕಾರಿದ್ದಾರೆ.

ತಮಿಳುನಾಡಿನಲ್ಲಿ ಎಷ್ಟು ಬಿಜೆಪಿ ಸಂಸದರು ಇದ್ದಾರೆ? ಕರ್ನಾಟಕದಲ್ಲಿ ಇರುವ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟಿದೆ? ಎಲ್ಲರೂ ಸ್ವಾರ್ಥ ಬಿಟ್ಟರೆ ಮಹದಾಯಿ ವಿವಾದ ಒಂದು ನಿಮಿಷದಲ್ಲಿ ಪರಿಹಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.