ಬೆಂಗಳೂರು(ಸೆ.28): ಅಕ್ಕ ಸಮ್ಮೇಳನಕ್ಜಾಗಿ ಅಮೆರಿಕಕ್ಕೆ ತೆರಳಿದ್ದ ಅಂಬರೀಷ್ ವಾಪಸಾಗಿದ್ದಾರೆ. ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ಜನ ಸಂಕಷ್ಟದಲ್ಲಿದ್ದಾಗ ಅವರ ಜೊತೆ ಇರದಿದ್ದಕ್ಕೆ ಅಂಬರೀಷ್ ಪದೇ ಪದೇ ಕ್ಷಮೆ ಕೋರಿದ್ದಾರೆ. ಸೆ.30ರ ತೀರ್ಪು ನೋಡಿ ಮಂಡ್ಯಕ್ಕೆ ತೆರಳುತ್ತೇನೆ ಎಂದು ಶಾಸಕ ಅಂಬರೀಶ್​ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ನೀರು ಬಿಡದೇ ಒಳ್ಳೆಯ ನಿರ್ಧಾರ ತಗೊಂಡಿದ್ದಾರೆ, ಸಿಎಂ ಸಿದ್ದರಾಮಯ್ಯ ನಿರ್ಧಾರ ಸರಿ, ಅಧಿಕಾರ ಹೋದ್ರೂ ಸರಿ ನೀರು ಬಿಡಬಾರದು ಎಂದರು. ಇದು ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ಆಗಲ್ಲ, ನನ್ನ ಒಳಗಿನ ನೋವು ನನಗೆ ಮಾತ್ರ ಗೊತ್ತು. ನಾನು ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ. ನಾನು ಮಜಾ ಮಾಡಲು ಹೋಗಿರಲಿಲ್ಲ. ಇನ್ಮುಂದೆ ಜನರ ದುಃಖದಲ್ಲಿ ಭಾಗಿಯಾಗುತ್ತೇನೆ ಎಂದು ಅಂಬರೀಶ್ ಹೇಳಿದ್ಧಾರೆ.

​ನಮಗೇ ನೀರಿಲ್ಲ, ಬೇರೆಯವರಿಗೆ ಬಿಡಲು ಸಾಧ್ಯವೇ?. ಬೇಕಾದಷ್ಟು ಜನ ನನ್ನ ಬಗ್ಗೆ ಬೇಕಾದಷ್ಟು ಮಾತಾಡಿಕೊಂಡಿದ್ದಾರೆ. ಇದಕ್ಕೆಲ್ಲ ನಾನು ಉತ್ತರ ಕೊಡಲ್ಲ, ಮಂಡ್ಯ ಬಗ್ಗೆ ನನಗೆ ಯಾವಾಗಲೂ ಪ್ರೀತಿ ಇದ್ದೇ ಇದೆ ಎಂದಿದ್ಧಾರೆ.