ಈಗ ಸ್ವತಃ ಬಿಜೆಪಿ ಶಾಸಕರೇ ಕೇಂದ್ರ ಸರ್ಕಾರದ ಕ್ರಮ ಅಂಬಾನಿ, ಅದಾನಿಗಳಿಗೆ ತಿಳಿದಿತ್ತು ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.
ನವದೆಹಲಿ (ನ.17): “500, 1000 ರೂ. ನೋಟುಗಳ ರದ್ದತಿ ಬಗ್ಗೆ ಅಂಬಾನಿ, ಅದಾನಿಗಳಿಗೆ ಮುಂಚೆಯೇ ಮಾಹಿತಿ ಇತ್ತು” ಹೀಗೆ ಆರೋಪ ಮಾಡಿರುವುದು ಆಮ್ ಆದ್ಮಿ ಪಕ್ಷದ ನಾಯಕರೋ ಅಥವಾ ಕಾಂಗ್ರೆಸ್ ನ ನೇತಾರರೋ ಅಲ್ಲ.
ಸ್ವತಃ ಬಿಜೆಪಿ ಪಕ್ಷದ ಶಾಸಕ ಭವಾನಿ ಸಿಂಗ್ ಈ ಬಗ್ಗೆ ಕ್ಯಾಮರಾ ಮುಂದೆ ಹೇಳಿಕೆ ನೀಡಿದ್ದಾರೆ. ಈಗ ಸ್ವತಃ ಬಿಜೆಪಿ ಶಾಸಕರೇ ಕೇಂದ್ರ ಸರ್ಕಾರದ ಕ್ರಮ ಅಂಬಾನಿ, ಅದಾನಿಗಳಿಗೆ ತಿಳಿದಿತ್ತು ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.
ರಾಜಸ್ಥಾನದ ಬಿಜೆಪಿ ಶಾಸಕರಾಗಿರುವ ಭವಾನಿ ಸಿಂಗ್ ರಾಜವತ್, 500, 1000 ರೂ. ನೋಟುಗಳ ರದ್ದತಿ ಬಗ್ಗೆ ಅಂಬಾನಿ ಹಾಗೂ ಅದಾನಿಗೆ ಮುಂಚೆಯೇ ಸುಳಿವು ದೊರೆತಿತ್ತು, ಕೇಂದ್ರ ಸರ್ಕಾರದ ಘೋಷಣೆಗೆ ಅನುಗುಣವಾಗಿ ಅವರು ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದರು, ನೀವು(ಸರ್ಕಾರ) ಹೊಸ ನೋಟುಗಳನ್ನು ಬೇಡಿಕೆಗೆ ತಕ್ಕಂತೆ ಮುದ್ರಿಸಬೇಕಿತ್ತು ಎಂದು ಹೇಳಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ.
