Asianet Suvarna News Asianet Suvarna News

ಬರಿ ಡೋರ್ ಮ್ಯಾಟ್ ಮಾತ್ರವಲ್ಲ ಶೂ,ನಾಯಿ ಕೋಟ್'ಗಳಲ್ಲಿದೆ ಭಾರತದ ಧ್ವಜ ಹಾಗೂ ಲಾಂಛನಾ

ಅಮೆರಿಕಾ ದೇಶದಲ್ಲಿ ಧ್ವಜ ಮಾದರಿಯ ಶೂಗಳು, ಲಾಂಛನ ಮಾದರಿಯ ನಾಯಿ ಕೋಟ್'ಗಳನ್ನು ಉತ್ಪಾದಿಸಿ ಆನ್'ಲೈನ್'ನಲ್ಲಿ ಮಾರಾಟಕ್ಕಿಟ್ಟಿದೆ.

Amazon Websites sell Indian flag emblem as shoe dog coat

ನವದೆಹಲಿ(ಜ.12): ಅಮೆಜಾನ್ ಇ-ಕಾಮರ್ಸ್ ಕಂಪನಿಯ ದೇಶದ್ರೋಹದ ಕೆಲಸಗಳು ಒಂದೊಂದಾಗಿ ಗೋಚರವಾಗುತ್ತಿವೆ. ಕೆನಡಾ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ ಡೋರ್ ಮ್ಯಾಟ್ ಮಾರಾಟ ಮಾಡಿ ಭಾರತದಿಂದ ಛೀಮಾರಿ ಹಾಕಿಸಿಕೊಂಡು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿತ್ತು.

ಈಗ ಅಮೆರಿಕಾ ದೇಶದಲ್ಲಿ ಧ್ವಜ ಮಾದರಿಯ ಶೂಗಳು, ಲಾಂಛನ ಮಾದರಿಯ ನಾಯಿ ಕೋಟ್'ಗಳನ್ನು ಉತ್ಪಾದಿಸಿ ಆನ್'ಲೈನ್'ನಲ್ಲಿ ಮಾರಾಟಕ್ಕಿಟ್ಟಿದೆ. ಭಾರತದ ಧ್ವಜ ಮಾರದಿಯ ಶೂಗಳಿಗೆ ಅಮೆರಿಕಾದಲ್ಲಿ 43.99 ಡಾಲರ್(3 ಸಾವಿರ ರೂ.)  ಶೂ ಲೇಸ್ ಬಿಡಿ ಭಾಗಗಳು 4.49 ಡಾಲರ್(300 ರೂ) ಆನ್'ಲೈನ್'ನಲ್ಲಿ ಮಾರಾಟಕ್ಕಿಟ್ಟಿವೆ.

ಅಮೆರಿಕಾದ ಆನ್'ಲೈನ್ ಕಂಪನಿ ಕೆಫೆ ಪ್ರೆಸ್ ನಾಯಿ ಧರಿಸುವ ಕೋಟ್'ಗಳನ್ನು 19.99 ಡಾಲರ್'(1362 ರೂ.)ಗೆ ಮಾರಾಟಕ್ಕಿಟ್ಟಿದೆ. ಭಾರತದ ದೇಶ ಲಾಂಛನ ಕಾಯಿದೆ, 2005ರಡಿ (ಅನುಚಿತ ಪದ ಬಳಕೆ ನಿಷೇಧ) ಭಾರತದ ಲಾಂಛನವನ್ನು ಯಾವುದೇ ವ್ಯಾಪಾರ, ವ್ಯವಹಾರ,ವೃತ್ತಿಗಳಲ್ಲಿ ಬಳಕೆ ಅಥವಾ ಯಾವುದೇ ಪೆಟೆಂಟ್, ವಿನ್ಯಾಸ ಮುಂತಾದವುಗಳಲ್ಲಿ ಬಳಸಿಕೊಂಡರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಅಮೆರಿಕಾದ ಧ್ವಜ ಕಾಯಿದೆಯ ನಿಯಮದ ಪ್ರಕಾರ ಅಮೆರಿಕಾದ ಧ್ವಜಗಳನ್ನು ಯಾವುದೇ ಉತ್ಪನ್ನಗಳಲ್ಲಿ ಬಳಸಬಹುದು. ಅಲ್ಲದೆ ಆ ದೇಶದಲ್ಲಿ ಒಳಉಡುಪು, ಕರವಸ್ತ್ರ ಮುಂತಾದ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

Follow Us:
Download App:
  • android
  • ios