ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಮರಿಂದರ್ ಸಿಂಗ್ ತಮ್ಮನ್ನು ತಾವು ಕ್ಯಾಪ್ಟನ್ ಎಂದು ಕರೆದುಕೊಳ್ಳುತ್ತಾರೆ ಆದರೆ ರಾಹುಲ್ ಗಾಂಧಿ ಆದೇಶವನ್ನು ಪಾಲಿಸುತ್ತಾರೆ. ಇವರು ಯಾವ ರೀತಿ ಕ್ಯಾಪ್ಟನ್ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ಅಮೃತಸರ (ಜ.30): ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಮರಿಂದರ್ ಸಿಂಗ್ ತಮ್ಮನ್ನು ತಾವು ಕ್ಯಾಪ್ಟನ್ ಎಂದು ಕರೆದುಕೊಳ್ಳುತ್ತಾರೆ ಆದರೆ ರಾಹುಲ್ ಗಾಂಧಿ ಆದೇಶವನ್ನು ಪಾಲಿಸುತ್ತಾರೆ. ಇವರು ಯಾವ ರೀತಿ ಕ್ಯಾಪ್ಟನ್ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೂ ವಾಗ್ದಾಳಿ ನಡೆಸಿದ್ದಾರೆ. ದೇಶಾದ್ಯಂತ ಪಂಜಾಬ್ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಸುಳ್ಳು ಹೇಳುವುದರ ಮೂಲಕ ಪಂಜಾಬಿನ ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ಶಾ ಆರೋಪಿಸಿದ್ದಾರೆ.

ಬಿಜೆಪಿ ನಾಯಕತ್ವದಲ್ಲಿ ಪಂಜಾಬ್ ಅಭಿವೃದ್ಧಿಯಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪಂಜಾಬ್ ಅಭಿವೃದ್ಧಿಗೆ ಡಬಲ್ ಎಂಜಿನ್ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.