ಕೊಪ್ಪಳ : ರಾಜ್ಯದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯುತ್ತಿದ್ದು, ಹಲವರನ್ನು ಕೈ ಬಿಟ್ಟು, ಕೆಲವರನ್ನು ಸೇರಿಸುವ ಮಾತುಗಳು ಕೇಳಿಬರುತ್ತಿವೆ. 

ಇದೇ ವೇಳೆ  ಕುಷ್ಟಗಿ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಇಂತಹದ್ದೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. 

ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಭಯ್ಯಾಪೂರ  ರಾಜೀನಾಮೆ ಕೋಡುತ್ತಾರೆ ಎನ್ನುವ ಚರ್ಚೆ ಜೋರಾಗಿದ್ದು, ಸಚಿವ ಸ್ಥಾನ ಸಿಗದಿದ್ದರೆ ಅಮರೇಗೌಡ ಭಯ್ಯಾಪೂರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಫೇಸ್ ಬುಕ್ ಪೋಸ್ಟ್ ಹಾಕಲಾಗಿದೆ.  

ಫೇಸ್ ಬುಕ್ ನಲ್ಲಿ ಅಮರೇಗೌಡ ಬೆಂಬಲಿಗ ಮಾನಪ್ಪ ತಳವಾರ ಎಂಬುವವರು ಸಚಿವ ಸ್ಥಾನ ಸಿಗದಿದ್ದಲ್ಲಿ ರಾಜೀನಾಮೆ ಸಾಧ್ಯತೆ ಎಂದು ಪೋಸ್ಟ್ ಹಾಕಿದ್ದಾರೆ.

ಈ ಹಿಂದೆಯೂ ಕಾಂಗ್ರೆಸ್ ಶಾಸಕ ಅಮರೇಗೌಡ ಭಯ್ಯಾಪೂರ ರಾಜೀನಾಮೆ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದು, ಇದೀಗ ಮತ್ತೊಮ್ಮೆ ಸಂಪುಟ ವಿಸ್ತರಣೆ  ವಿಚಾರದ ಚರ್ಚೆ ಬಂದ ವೇಳೆಯೇ ರಾಜೀನಾಮೆ ಬಗ್ಗೆ ಸುದ್ದಿಯಾಗಿದೆ.