Asianet Suvarna News Asianet Suvarna News

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ರಾಬ್ರಿ ದೇವಿ, ಮಿಸಾ ಭಾರತಿಗೆ ಐಟಿ ನೋಟಿಸ್

ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಮತ್ತು ಮಕ್ಕಳ ಮೇಲೆ ಬೇನಾಮಿ ವ್ಯವಹಾರ ಕಾಯ್ದೆಯಡಿಯಲ್ಲಿ  ಪ್ರಕರಣ ದಾಖಲಿಸಿರುವ ಆದಾಯ ತೆರಿಗೆ ಇಲಾಖೆ ಇವರ ಆಸ್ತಿ ಮುಟ್ಟುಗೋಲು ಹಾಕುವ ಸಂಬಂಧ ನೋಟಿಸ್ ಜಾರಿ ಮಾಡಿದೆ. ಲಾಲು ಪುತ್ರಿ ಸಂಸದೆ ಮೀಸಾ ಭಾರತಿ ಸೇರಿದಂತೆ ಪತ್ನಿ ರಾಬ್ರಿ ದೇವಿ, ಮತ್ತಿಬ್ಬರು ಮಕ್ಕಳ ಮೇಲೂ ಆರೋಪ ಹೊರಿಸಲಾಗಿದೆ.

Allegedly Benami Properties Owned By Lalu Yadav Daughter Seized

ನವದೆಹಲಿ (ಜೂ.20): ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಮತ್ತು ಮಕ್ಕಳ ಮೇಲೆ ಬೇನಾಮಿ ವ್ಯವಹಾರ ಕಾಯ್ದೆಯಡಿಯಲ್ಲಿ  ಪ್ರಕರಣ ದಾಖಲಿಸಿರುವ ಆದಾಯ ತೆರಿಗೆ ಇಲಾಖೆ ಇವರ ಆಸ್ತಿ ಮುಟ್ಟುಗೋಲು ಹಾಕುವ ಸಂಬಂಧ ನೋಟಿಸ್ ಜಾರಿ ಮಾಡಿದೆ. ಲಾಲು ಪುತ್ರಿ ಸಂಸದೆ ಮೀಸಾ ಭಾರತಿ ಸೇರಿದಂತೆ ಪತ್ನಿ ರಾಬ್ರಿ ದೇವಿ, ಮತ್ತಿಬ್ಬರು ಮಕ್ಕಳ ಮೇಲೂ ಆರೋಪ ಹೊರಿಸಲಾಗಿದೆ.

1 ಸಾವಿರ ಕೋಟಿ ರೂ ಬೇನಾಮಿ ಆಸ್ತಿ ಪ್ರಕರಕ್ಕೆ ಸಂಬಂಧಿಸಿದಂತೆ ಮನೆಯನ್ನು, ಪ್ಲಾಟನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯ ಒಟ್ಟು ಮೌಲ್ಯವನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಇನ್ನು ಕೆಲವು ಆಸ್ತಿಗಳನ್ನು ಶೀಘ್ರವೇ ವಶಕ್ಕೆ ತೆಗೆದುಕೊಳ್ಳಲಾಗುವುದು. ಅಗತ್ಯ ಬಿದ್ದರೆ ಲಾಲು ಪುತ್ರಿ ಮೀಸಾ ಭಾರತಿ ಹಾಗೂ ಅವರ ಪತಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios